ಕಾಸರಗೋಡು: ಕಣ್ಣೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪಿ.ಪಿ. ದಿವ್ಯಾರ ಬೇನಾಮಿ ಕಂಪೆನಿ ಎಂದು ಆರೋಪ ಎದುರಿಸುತ್ತಿರುವ ಕಾರ್ಟನ್ ಇಂಡಿಯಾದ ಕಾಸರಗೋಡಿನ ವ್ಯವಹಾರಗಳನ್ನು ಕೂಡಾ ತನಿಖೆ ನಡೆಸಬೇಕೆಂದು ದೂರು ನೀಡಲಾಗಿದೆ. ಜಿಲ್ಲಾ ಪಂಚಾಯತ್‌ನ ಕಳೆದ ಐದು ವರ್ಷದ ವಿವಿಧ ಯೋಜನೆಗಳನ್ನು ತನಿಖೆಗೊಳಪಡಿಸಬೇಕೆಂದು ವಿಜಿಲೆನ್ಸ್‌ಗೆ ನೀಡಿದ ದೂರಿನಲ್ಲಿ ಆಗ್ರಹಿಸಲಾಗಿದೆ. ಬ್ಲೋಕ್ ಪಂ. ಸದಸ್ಯ, ಮುಸ್ಲಿಂ ಲೀಗ್ ಮುಖಂಡ ಅನ್ವರ್ ಸಾದಾತ್ ವಿಜಿಲೆನ್ಸ್‌ಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯತ್‌ನ ಟೆಂಡರ್ ಕ್ರಮಗಳು, ಕರಾರು ವ್ಯವಸ್ಥೆಗಳು, ಸರಕಾರಿ ಫಂಡ್ ವಿನಿಯೋಗ ಸಹಿತ ತನಿಖೆಗೊಳಪಡಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಿಲ್ಕ್ (ಎಸ್‌ಐಎಲ್‌ಕೆ) ನೀಡಿದ ಯೋಜನೆಗಳನ್ನು ಪರಿಶೀಲಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಕಣ್ಣೂರು ಜಿಲ್ಲಾ ಪಂಚಾಯತ್‌ನ ವಿವಿಧ ಯೋಜನೆಗಳು ಕಾರ್ಟನ್ ಇಂಡಿಯಾ ಕಂಪೆನಿಗೆ ನೀಡಿರುವುದರ ಬೆನ್ನಲ್ಲೇ ಕಾಸರಗೋಡು ಜಿಲ್ಲಾ ಪಂಚಾಯತ್‌ನ ಯೋಜನೆಗಳನ್ನು ಇದೇ ಕಂಪೆನಿಗೆ ನೀಡಲಾಗಿತ್ತು ಎಂಬ ಮಾಹಿತಿ ಇದೆ. 4 ಕೋಟಿಗಿಂತ ಹೆಚ್ಚು ರೂ.ಗಳ ಯೋಜನೆಗಳು ಕಾರ್ಟನ್ ಇಂಡಿಯಾ ಅಲಯನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಈ ಆರೋಪಗಳನ್ನು ನಿಷೇಧಿಸಿದ್ದರು. 2021 ಮಾರ್ಚ್ 1ರಿಂದ 2025 ಅಕ್ಟೋಬರ್ ವರೆಗಿನ ಕಾಲಾವಧಿಯಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತಾನುಮತಿಗಳು, ಕಾಮ ಗಾರಿಗಳು ಎಂಬಿವುಗಳ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದು, ಇದರ ಪ್ರತಿಯನ್ನು ಗೃಹ ಸಚಿವ ರಮೇಶ್ ಚೆನ್ನಿತ್ತಲರಿಗೂ ಕಳುಹಿಸಿಕೊಡಲಾಗಿದೆ.






