ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಕಡವತ್ ಬಳಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಬೂತ್ ನಿರ್ಮಾಣದ ವಿರುದ್ಧ ಜನಪರ ಮುಷ್ಕರ ಸಮಿತಿ ನೇತೃತ್ವದಲ್ಲಿ ನಿನ್ನೆ ನಡೆದ ಪ್ರತಿಭಟನೆಗೆ ಸಂಬಂಧಿಸಿ 150 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಮಂದಿಯನ್ನು ಬಂಧಿಸಲಾಗಿದೆ. ಮುಷ್ಕರ ಸಮಿತಿ ನೇತಾರರಾದ ಸುಲ್ಫಿಕರ್ (42), ಬಿ.ಎನ್. ಮೊಹಮ್ಮದಲಿ (62), ಸೈನುಉಹಾರಿಸ್ (25), ಯೂಸುಫ್ ಉಳುವಾರು (45), ಅಬ್ದುಲ್ ಮುನೀರ್ (36), ಮೊಯ್ದೀನ್ ಕುಂಞಿ (37), ಅನ್ವರ್ (49), ಮಾಹಿನ್ ಕೇಳತ್ (34), ಅಬ್ದುಲ್ ಮಜೀದ್ (34), ಅಬ್ದುಲ್ ಲತೀಫ್ (40) ಎಂಬಿವರನ್ನು ಬಂಧಿಸಲಾಗಿದೆ.
ಇದೇ ವೇಳೆ ಒಂಡೆದೆ ಟೋಲ್ ಬೂತ್ ನಿರ್ಮಾಣ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿರುವಾಗಲೇ ಇನ್ನೊಂದೆಡೆ ಟೋಲ್ ಬೂತ್ ಕಾಮಗಾರಿ ಮುಂದುವರಿಯು ತ್ತಿರುವುದಾಗಿ ದೂರಲಾಗಿದೆ. ನಿನ್ನೆ ಜನಪರ ಮುಷ್ಕರ ಸಮಿತಿ ಪ್ರತಿಭಟನೆ ನಡೆಸಿ ಮರಳಿದ ಬೆನ್ನಲ್ಲೇ ಟೋಲ್ ಬೂತ್ ನಿರ್ಮಾಣದ ಫಿಲ್ಲರ್ ಸ್ಥಾಪನೆ ನಡೆದಿದೆ ಎಂದು ದೂರಲಾಗಿದೆ.