ಹೊಸಂಗಡಿ: ಇಲ್ಲಿನ ವಸತಿಗೃಹದ ಕೊಠಡಿಯಲ್ಲಿ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಮಹಿಳೆಯನ್ನು ಜೊತೆಗೆ ನಿಲ್ಲಿಸಿ ನಗ್ನಚಿತ್ರ ತೆಗೆದು ಬೆದರಿಕೆಯೊಡ್ಡಿ ಫೋನ್ ಹಾಗೂ ಹಣವನ್ನು ಅಪಹರಿಸಿರುವುದಾಗಿ ದೂರಲಾಗಿದೆ. ಉಳ್ಳಾಲ ಮೋಂಟುಗೋಳಿಯ ಮುಹಮ್ಮದ್ ಹನೀಫ್ (41)ನ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಘಟನೆ ನಡೆದಿದೆ. ಗೆಳತಿಯೊಂದಿಗೆ ದೂರುದಾತ ವಸತಿಗೃಹದಲ್ಲಿ ಕೊಠಡಿ ತೆಗೆದಿದ್ದನು. ಈ ಸಮಯದಲ್ಲಿ ಮೂರು ಮಂದಿಯ ತಂಡ ಕೊಠಡಿಗೆ ನುಗ್ಗಿ ಯುವತಿ ಹಾಗೂ ಯುವಕನನ್ನು ಮಂಚದಲ್ಲಿ ಜೊತೆಗೆ ಕುಳ್ಳಿರಿಸಿ
ಅರೆನಗ್ನ ವೀಡಿಯೋ ಹಾಗೂ ಫೊಟೋಗಳನ್ನು ತೆಗೆದಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ. 2 ಲಕ್ಷ ರೂ. ನೀಡದಿದ್ದರೆ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸಲಾಗುವುದೆಂದು ಬೆದರಿಕೆ ಯೊಡ್ಡಿದ್ದು, ಮೊಬೈಲ್ ಫೋನ್ ಹಾಗೂ 5000 ರೂ.ವನ್ನು ಅಪಹರಿಸಿ ರುವುದಾಗಿಯೂ ದೂರಿನಲ್ಲಿ ತಿಳಿಸಲಾ ಗಿದೆ. ಅಕ್ರಮಿಗಳನ್ನು ಕಂಡರೆ ಗುರುತು ಹಚ್ಚ ಬಹುದೆಂದು ದೂರಿನಲ್ಲಿ ವಿವರಿಸಲಾಗಿದೆ.







