ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಕಾಪಾ ಪ್ರಕರಣದ ಆರೋಪಿ ತನ್ನ ಪತ್ನಿಗೆ ಫೋನ್ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪವುಂಟಾಗಿದೆ. ಬೆದರಿಕೆ ಕರೆಯನ್ನು ರೆಕಾರ್ಡ್ ಮಾಡಿ ಪತ್ನಿ ಜೈಲು ಸೂಪರಿಂಟೆಂಡೆಂಟ್‌ಗೆ ಕಳುಹಿಸಿಕೊಟ್ಟಿದ್ದು, ಇದರ ಮುಂದುವರಿಕೆಯಾಗಿ ನಡೆದ ತನಿಖೆಯಲ್ಲಿ ಆರೋಪಿಯ ಕೈಯಲ್ಲಿ ಮೊಬೈಲ್ ಫೋನ್ ಪತ್ತೆಹಚ್ಚಲಾಗಿದೆ. ಜೈಲು ಸೂಪರಿಂಟೆಂಡೆಂಟ್ ಕೆ. ವೇಣು ನೀಡಿದ ದೂರಿನಂತೆ ೧೫ನೇ ನಂಬ್ರ ಸೆಲ್‌ನ ಕಾಪಾ ಪ್ರಕರಣದ ಆರೋಪಿ ಯಾದ ತೃಶೂರು ಪುದುಕ್ಕಾಡ್ ನಾಯರಂಗಾಡಿ ತಾಳೇಕಾಟಿಲ್ ಹೌಸ್‌ನ ಗೋಪ ಕುಮಾರ್ ವಿರುದ್ಧ ಇನ್ನೊಂದು ಕೇಸು ದಾಖಲಿಸಲಾಗಿದೆ. ಕಾಪಾ ಪ್ರಕರಣದಲ್ಲಿ ಸೆರೆಗೀಡಾಗಿ ಜೈಲಿನಲ್ಲಿರುವ ಗೋಪ ಕುಮಾರ್ ಪತ್ನಿಗೆ ಫೋನ್ ಕರೆ ಮಾಡಿ ತನ್ನ ಬ್ಯಾಂಕ್ ಖಾತೆಗೆ ಹಣ ಕಳುಹಿಸುವಂತೆ ತಿಳಿಸಿ ದ್ದಾನೆ. ಅದು ಸಾಧ್ಯವಿಲ್ಲವೆಂದು ಪತ್ನಿ ತಿಳಿಸಿದಾಗ ಆಕೆಗೆ ಕೊಲೆ ಬೆದರಿಕೆಯೊ ಡ್ಡಿರು ವುದಾಗಿ ದೂರಲಾಗಿದೆ





