ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಸುರೇಂದ್ರನ್ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಸಿದ ಪಾದಯಾತ್ರೆಯ ಅಗತ್ಯಕ್ಕಾಗಿ ಪಡೆದ ವಾಹನವನ್ನು ಮರಳಿ ನೀಡಿಲ್ಲವೆಂಬ ಆರೋಪವುಂ ಟಾಗಿದೆ. ಕಾಞಂಗಾಡ್ ಕುಶಾಲ್ ನಗರದ ಕೆ.ಕೆ. ಸಂತೋಷ್ ಕುಮಾರ್‌ರ ಪತ್ನಿ ಗೀತು ರೈ (42) ನೀಡಿದ ದೂರಿನಂತೆ ಶಿವಸೇನೆ ಎರ್ನಾಕುಳಂ ಜಿಲ್ಲಾಧ್ಯಕ್ಷ ಸುಧೀರ್ ಗೋಪಿ, ಶಿವಸೇನೆ ರಾಜ್ಯಾಧ್ಯಕ್ಷ ಪೇರೂರ್‌ಕಡ ಹರಿಕುಮಾರ್ ಎಂಬಿವರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೂರು ದಾತೆಯ ಪತಿಯ ಮಾಲ ಕತ್ವದಲ್ಲಿರುವ ಟಾಟಾ ಏಸ್ ವಾಹನವನ್ನು ಕೆ. ಸುರೇಂದ್ರನ್ ನಡೆಸಿದ ಪಾದಯಾತ್ರೆಗಾಗಿ ಉಪಯೋಗಿಸಿ ಬಳಿಕ ಮರಳಿ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. 2024 ಜನವರಿ 28ರಂದು ದೂರುದಾತೆಯ ಮನೆಯಿಂದ ವಾಹನವನ್ನು ಕೊಂಡೊಯ್ಯಲಾಗಿತ್ತು. ಅನಂತರ ವಾಹನವನ್ನು ಮರಳಿ ಕೇಳಿದಾಗ ಬೆದರಿಕೆಯೊಡ್ಡಿರುವುದಾಗಿಯೂ, ಬಾಡಿಗೆಯನ್ನು ನೀಡದೆ ವಂಚಿಸಿರುವುದಾಗಿ ಹೊಸದುರ್ಗ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ದಾಖಲಿಸಲಾಗಿದೆ. ಮೊದಲು ಎರ್ನಾಕುಳಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅಲ್ಲಿ ದಾಖಲಿಸಿ ಕೊಂಡ ಪ್ರಕರಣವನ್ನು ಹೊಸ ದುರ್ಗಕ್ಕೆ ಹಸ್ತಾಂತರಿಸಿ ಹೊಸ ಪ್ರಕರಣ ದಾಖಲಿಸಲಾಗಿದೆ.





