ಕಾಸರಗೋಡು: ಬಂದಡ್ಕ ಬೇತಲಂ ಉಂದತ್ತಡ್ಕ ನಿವಾಸಿಯಾದ ೧೦ನೇ ತರಗತಿ ವಿದ್ಯಾರ್ಥಿನಿ ದೇವಿಕ (16) ಎಂಬಾಕೆ ನೇಣು ಬಿಗಿದು ಸಾವಿಗೀಡಾದ ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಮಂಗಳವಾರ ಬೆಳಿಗ್ಗೆ ದೇವಿಕ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ದೇವಿಕ ಹಾಗೂ ಸಹೋದರ ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ತಂದೆ ನಿಧನರಾದ ಬಳಿಕ ತಾಯಿ ಬೇರೊಬ್ಬನನ್ನು ಮದುವೆಯಾಗಿದ್ದರು. ಇದೇ ವೇಳೆ ದೇವಿಕ ಆತ್ಮಹತ್ಯೆಗೈಯ್ಯಲು ಕಾರಣವೇ ನೆಂದು ಇದುವರೆಗೆ ನಡೆದ ತನಿಖೆಯಲ್ಲಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಅಜ್ಜಿ ಹಾಗೂ ಸಹೋದರನಿಂದ ಪೊಲೀಸರು ಹೇಳಿಕೆ ದಾಖ ಲಿಸಿಕೊಂ ಡಿದ್ದರೂ ಸಾವಿಗೆ ಕಾರಣವಾದ ಯಾವುದೇ ಸೂಚನೆ ಲಭಿಸಿಲ್ಲ. ದೇವಿಕಳ ಮೊಬೈಲ್ ಫೋನ್ ಪೊಲೀಸರು ವಶಕ್ಕೆ ತೆಗೆದು, ಪರಿಶೀಲಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೈಬರ್ ಸೆಲ್‌ನ ಸಹಾಯ ಯಾಚಿಸಲಾಗಿದೆ. ದೇವಿಕ ಸಾವಿಗೀಡಾಗುವ ಮೊದಲು ಆಕೆಯ ಮೊಬೈಲ್‌ಗೆ ಬಂದ ಹಾಗೂ ಹೋದ ಕರೆಗಳನ್ನು ಪರಿಶೀಲಿಸಿದರೆ ಸಾವಿಗೆ ಕಾರಣಗಳ ಸೂಚನೆ ಲಭಿಸ ಬಹುದೆಂದು ಪೊಲೀಸರು ನಿರೀಕ್ಷಿಸಿ ದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದ್ದು, ಅದರ ವರದಿ ಇದುವರೆಗೆ ಲಭಿಸಿಲ್ಲ. ಇನ್ನೆರಡು ದಿನಗಳೊಳಗೆ ಅದು ಲಭಿಸಲಿದ್ದು, ಅನಂತರ ತನಿಖೆಯನ್ನು ತೀವ್ರಗೊಳಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.