ಕುಂಬಳೆ: ಮನೆಯ ಹಿಂದೆ ಬಟ್ಟೆ ಒಗೆಯುತ್ತಿದ್ದ ಯುವತಿಯ ಮಾನಭಂಗಕ್ಕೆತ್ನಿಸಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕೊಯಿಪ್ಪಾಡಿ ಪೆರುವಾಡ್ ನಿವಾಸಿ ಜಿತೇಶ್(32) ಬಂಧಿತ ಆರೋಪಿ. ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಶೃಜೇಶ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
೩೪ರ ಹರೆಯದ ಯುವತಿ ಈ ನಿನ್ನೆ ಬೆಳಿಗ್ಗೆ ಮನೆಯ ಹಿಂದುಗಡೆ ಬಟ್ಟೆ ಒಗೆಯುತ್ತಿದ್ದ ವೇಳೆ ಹಿಂದಿ ನಿಂದ ಬಂದು ಆಕೆಯನ್ನು ಅಪ್ಪಿ ಹಿಡಿದಿದ್ದು ಆಕೆ ಅದನ್ನು ವಿರೋಧಿಸಿ ದಾಗ ಆರೋಪಿ ಎದುರುಭಾಗದಿಂದ ಮತ್ತೆ ಆಕೆಯನ್ನು ಅಪ್ಪಿ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದನೆಂದು ಆರೋಪಿಸಿ ಯುವತಿ ಆರೋಪಿಯ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಜಿತೇಶ್‌ನ ವಿರುದ್ಧ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.







