ವಿದೇಶ ಉದ್ಯೋಗದ ವಿಸಾ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿದ ಪ್ರಕರಣ: ಆರೋಪಿ ಬೆಂಗಳೂರಿನಿಂದ ಸೆರೆ; ಜಿಲ್ಲೆಯಲ್ಲಿ ಮಾತ್ರವಾಗಿ 28 ದೂರುಗಳು, ಮಡಿಕೇರಿ ನಿವಾಸಿಗಾಗಿ ಶೋಧ

ಕಾಸರಗೋಡು: ಜರ್ಮನಿ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಭಾರೀ ವೇತನದ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧೆಡೆ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದ ಆರೋಪಿಯನ್ನು ಬೆಂಗಳೂರಿನಿಂದ ಪೊಲೀಸರು ಬಂಧಿಸಿದ್ದಾರೆ.

ತೃಶರು ಅಷ್ಟಮಿಚಿರೆ ನಿವಾಸಿ ಪಿ.ಬಿ. ಗೌತಮ್‌ಕೃಷ್ಣ (೨೫)ಬಂಧಿತ ಆರೋಪಿ. ವಿದೇಶ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಕೇರಳದ ವಿವಿಧ ಜಿಲ್ಲೆಗಳ ೩೦ರಷ್ಟು ಮಂದಿಯಿಂದ ಸುಮಾರು ೬೦ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಹಣ ನೀಡಿದರೂ  ವಿಸಾ ಲಭಿಸದೇ ಇರುವುದನ್ನು ಹಲವರು ಪ್ರಶ್ನಿಸತೊಡಗಿ ದಾಗ ಆರೋಪಿ ಗೌತಮ್‌ಕೃಷ್ಣ ಅದಕ್ಕೆ ಒಂದಲ್ಲ ಒಂದು ಕಾರಣ ನೀಡಿ ನುಣುಚಿಕೊಳ್ಳುವ ಯತ್ನ ನಡೆಸಿದ್ದನು. ಇದರಿಂದ ನಾವು ವಂಚಿತರಾಗಿದ್ದೇವೆಂ ಬುದನ್ನು ಮನಗಂಡು ಹಣ ನೀಡಿದ ಹಲವರು ಕೊನೆಗೆ ಪೊಲೀಸರಿಗೆ ದೂರು ನೀಡಲಾರಂಭಿಸಿ ದರು. ಆರೋಪಿ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್‌ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಹೊಸದುರ್ಗ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್, ಎಎಸ್‌ಐ ಆನಂದಕೃಷ್ಣನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸತೀಶ್ ಕುಮಾರ್, ಕಮಲ್ ಕುಮಾರ್, ಜ್ಯೋತಿಷ್,ಸೈಬರ್ ತಜ್ಞ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಕೆ.ಟಿ. ಅನಿಲ್, ಸಿವಿಲ್ ಪೊಲೀಸ್ ಆಫೀಸರ್  ರಂಜಿತ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬೆಂಗಳೂರಿನಿಂದ ಬಂಧಿಸಿದೆ. 

ಬಂಧಿತ ಆರೋಪಿ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಮಾತ್ರವಾಗಿ ಇಂತಹ ವಂಚನೆ ಬಗ್ಗೆ 28 ಮಂದಿ ದೂರು ಸಲ್ಲಿಸಿದ್ದಾರೆ. ಆ ಪೈಕಿ ಒಂದು ಕೇಸು ದಾಖಲಿಸಲಾಗಿದೆ. ಈ ವಂಚನಾ ಜಾಲದಲ್ಲಿ ಮಡಿಕೇರಿ ನಿವಾಸಿ ಚಂದ್ರ ಎಂಬಾತನೂ ಶಾಮೀಲಾಗಿರುವ ಬಗ್ಗೆ ಮಾಹಿತಿ ಲಭಸಿದ್ದು, ಆ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಶೋಧ ಆರಂಭಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪದವೀಧರನಾಗಿರುವ ತನ್ನ ಮಗ ಶಿಕ್ಷಣ ಸಂಸ್ಥೆಗಳಲ್ಲಿ  ಸೀಟು ಒದಗಿಸಲು ಹಲವರಿಗೆ ಸಹಾಯ ಒದಗಿಸುತ್ತಿ ದ್ದನು. ಆದರೆ ಇಂತಹ ವಂಚನೆ ಬಗ್ಗೆ ನಮಗೇನೂ ತಿಳಿದಿಲ್ಲವೆಂದು ಆರೋಪಿಯ ತಾಯಿ ಹೇಳಿದ್ದಾರೆಂ ದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page