ಕಾಸರಗೋಡು: ಕಾಸರಗೋಡು ಲೈಟ್ ಹೌಸ್‌ಬಳಿಯ ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಗಂಡಸಿನ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿ ನಿಗೂಢತೆಗಳು ಮುಂದು ವರಿಯುತ್ತಿದೆ. ಮೃತಪಟ್ಟ ವ್ಯಕ್ತಿ ಯಾರೆಂದು ತಿಳಿಯದ ಹಿನ್ನೆಲೆಯಲ್ಲಿ ಸಾವಿನ ಕುರಿತಾದ ತನಿಖೆ ಮುಂದು ವರಿಸಲು ತೊಡಕಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೂವರೆ ತಿಂಗಳ ಹಿಂದೆ ಮೃತ ಪಟ್ಟ ವ್ಯಕ್ತಿಯ ದೇಹ ಇದಾಗಿದೆ ಯೆಂದು ಸಂಶಯಿಸಲಾಗುತ್ತಿದ್ದು ಆದರೆ ತಲೆ ಮಾತ್ರ ಬೇರ್ಪಟ್ಟಿರು ವುದು ನಿಗೂಢತೆಗೆ ಕಾರಣವಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದ ಲ್ಲಿರಿಸಿದ್ದು, ಮೃತ ವ್ಯಕ್ತಿ ಯಾರೆಂದು ಪತ್ತೆಹಚ್ಚಲು ಸಾಧ್ಯವಾಗದಿದ್ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಇದೇ ವೇಳೆ ತನಿಖೆಯಂಗವಾಗಿ ಜಿಲ್ಲೆಯಿಂದ ನಾಪತ್ತೆಯಾದವರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.





