ಕಲ್ಲಿಕೋಟೆ: 16ರ ಹರೆಯದ ಬಾಲಕಿಯನ್ನು ಫ್ಲಾಟ್‌ಗೆ ತಲುಪಿಸಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ದಲ್ಲಿ ಸೆರೆಗೀಡಾದ ಬದಿಯಡ್ಕ ಬಳಿಯ ನೆಕ್ರಾಜೆ ನಿವಾಸಿಗಳಾದ ಇಬ್ಬರ ಸಹಿತ ನಾಲ್ಕು ಮಂದಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ನೆಕ್ರಾಜೆ ಚರ್ಲಡ್ಕ ಪಾಂಡಿ ಮೂಲೆ ನಿವಾಸಿ ಪಿ.ಎ. ಮುಹಮ್ಮದ್ ಸಮಿ (19), ನೆಕ್ರಾಜೆ ನಿವಾಸಿ ಆಲಂಕೋಲ್ ವೀಟಿಲ್ ಎನ್.ಎ. ಮುಹಮ್ಮದ್ ರಯೀಸ್(18), ಪುದುಪ್ಪಾಡಿ ಕೈದಪ್ಪೊಯಿಲ್ ಚೀನಿಪರಂಬಿಲ್ ಮುಹಮ್ಮದ್ ಸಾಲಿಹ್ (45), ಪುದುಪ್ಪಾಡಿ ವರುವಿನ್ ಕಾಲದ ವಿ.ಕೆ. ಶಬೀರ್‌ಅಲಿ (41) ಎಂಬಿವರು ರಿಮಾಂಡ್‌ನಲ್ಲಿರುವ ಆರೋಪಿಗಳಾಗಿದ್ದಾರೆ.
ಈ ತಿಂಗಳ 20ರಂದು 16ರ ಹರೆಯದ ಬಾಲಕಿ ಮನೆಯವರೊಂದಿಗೆ ಸಿಟ್ಟುಗೊಂಡು ಪೆರಿಂದಲ್ ಮಣ್ಣದಿಂದ ಕಲ್ಲಿಕೋಟೆಗೆ ತಲುಪಿದ್ದಳು. ೨೧ರಂದು ಮುಂಜಾನೆ ಬೀಚ್‌ನಲ್ಲಿ ಕಂಡುಬಂದ ಬಾಲಕಿಯನ್ನು ಮುಹಮ್ಮದ್ ಸಮಿ ಹಾಗೂ ಮುಹಮ್ಮದ್ ರಯೀಸ್ ಪರಿಚಯಗೊಂಡಿದ್ದರು. ಬಳಿಕ ಆಕೆಗೆ ಕೆಲಸ ದೊರಕಿಸಿಕೊಡುವುದಾಗಿಯೂ, ವಾಸಿಸಲು ಸ್ಥಳ ಸೌಕರ್ಯವೊದ ಗಿಸಿಕೊಡುವುದಾಗಿ ತಿಳಿಸಿ ಜತೆಗೆ ಕರೆದೊಯ್ದಿದ್ದರು. ಅನಂತರ ಈ ಇಬ್ಬರು ಆರೋಪಿಗಳು ಮತ್ತಿಬ್ಬರು ಆರೋಪಿಗಳಿಗೆ ಈ ವಿಷಯವನ್ನು ತಿಳಿಸಿದ್ದರು. ಈ ವೇಳೆ ನಗರದಲ್ಲಿದ್ದ ಇಬ್ಬರು ಆರೋಪಿಗಳು ವಾಹನದಲ್ಲಿ ಬೀಚ್‌ಗೆ ತಲುಪಿದ್ದರು. ಅನಂತರ ಆರೋಪಿಗಳು ಬಾಲಕಿಯನ್ನು ಪಾಲಾಳಿ ಸೇತುವೆ ಬಳಿಯ ಫ್ಲಾಟ್‌ಗೆ ತಲುಪಿಸಿದ್ದಾರೆ. ಅಲ್ಲಿ ಆಕೆಗೆ ಮದ್ಯ, ಮಾದಕವಸ್ತು ನೀಡಿ ಕಿರುಕುಳ ನೀಡಿದ್ದಾರೆ. ಬಳಿಕ ಬಾಲಕಿಯನ್ನು 22ರಂದು ಆರೋಪಿಗಳು ಬೀಚ್‌ಗೆ ತಲುಪಿಸಿ 4೦೦೦ ರೂ.ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ದೂರಲಾಗಿದೆ. ಬೀಚ್‌ನಲ್ಲಿ ಗಸ್ತು ನಡೆಸುತ್ತಿದ್ದ ಮಹಿಳಾ ಹೆಲ್ಫ್‌ಲೈನ್ ತಂಡ ಬಾಲಕಿಯನ್ನು ವಿಚಾರಿಸಿದಾಗ ಕಿರುಕುಳ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಾಲಕಿಯನ್ನು ಠಾಣೆಗೆ ತಲುಪಿಸಿ ಹೆಚ್ಚಿನ ಮಾಹಿತಿ ಸಂಗ್ರ ಹಿಸಲಾಯಿತು. ಈ ವೇಳೆ ಬಾಲಕಿಗೆ ಮುಹಮ್ಮದ್ ರಯೀಸ್ ನೀಡಿದ್ದ ಮೊಬೈಲ್ ನಂಬ್ರ ಲಭಿಸಿದ್ದು ಅದರ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು.







