ಕಾಟಿಪಳ್ಳದಲ್ಲಿ ಯುವಕ ಗುಂಡೇಟು ತಗಲಿ ಸಾವಿಗೀಡಾದ ಪ್ರಕರಣ: ತನಿಖೆ ಆರಂಭ

ಕಾಸರಗೋಡು: ಬೋವಿಕ್ಕಾನ ಬಳಿಯ ಕಾಟಿ ಪಳ್ಳದಲ್ಲಿ  ಗುಂಡೇಟು ತಗಲಿ  ಯುವಕ ಸಾವಿಗೀಡಾದ ಪ್ರಕರಣದಲ್ಲಿ  ಆದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಕೈಯಲ್ಲಿದ್ದ   ಬಂದೂಕಿನಿಂದ ಅಕಸ್ಮಾತ್‌ಆಗಿ   ಗುಂಡು ಹಾರಿರುವುದೇ ಯುವಕನ ಸಾವಿಗೆ ಕಾರಣವೆಂದು   ತನಿಖೆಯಲ್ಲಿ ತಿಳಿದುಬಂದಿರು ವುದಾಗಿ ಹೇಳಲಾಗುತ್ತಿದೆ.  ಕಾಟಿಪಳ್ಳ ನಿವಾಸಿಯಾದ ಮೊಯ್ದು ಎಂಬವರ ಪುತ್ರ ಹೈದರಲಿ (27) ಗುಂಡೇಟು ತಗಲಿ   ಸಾವಿಗೀಡಾದ ದುರ್ದೈವಿ ಯಾಗಿದ್ದಾರೆ.  ಸಹೋದರಿಯ  ಮನೆಗೆಂದು ತಿಳಿಸಿ ಹೈದರಲಿ ಮೊನ್ನೆ ರಾತ್ರಿ ಮನೆಯಿಂದ ತೆರಳಿದ್ದರೆನ್ನ ಲಾಗಿದೆ. ಆದರೆ ಅವರು ಸಹೋದ ರಿಯ ಮನೆಗೆ ತಲುಪದಿರುವುದರಿಂದ ಫೋನ್  ಮಾಡಿದರೂ ಕರೆಯನ್ನು   ಸ್ವೀಕರಿಸಿರಲಿಲ್ಲ. ಇದರಿಂದ ಸಂಬಂಧಿಕರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಸ್ಥಳೀಯ ನಿವಾಸಿಯಾದ ಯುವಕ ಎರ್ನಾಕುಳಂಗೆ ಹೋಗಿ ಮರಳುತ್ತಿದ್ದಾಗ  ಕಾಟಿಪಳ್ಳ ಬಳಿಯ ಮೈದಾನದಲ್ಲಿ ರಾತ್ರಿ 12.10ರ ವೇಳೆ ಸ್ಕೂಟರ್ ಹಾಗೂ ಹೈದರಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಸ್ನೇಹಿತನನ್ನು ಸೇರಿಸಿಕೊಂಡು ಹೈದರಲಿಯನ್ನು ಕಾರಿನಲ್ಲಿ ಚೆರ್ಕಳದ ಆಸ್ಪತ್ರೆಗೆ ತಲುಪಿ ಸಿದ್ದರು. ಆದರೆ ಅದರ ಮೊದಲೇ ಸಾವು ಸಂಭವಿಸಿರುವುದಾಗಿ ವೈದ್ಯರು ನಡೆಸಿದ ತಪಾಸಣೆಯಲ್ಲಿ ತಿಳಿದುಬಂದಿದೆ.

ಮನೆಯಿಂದ 100 ಮೀಟರ್ ದೂರದಲ್ಲಿ ಹೈದರಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಸಮೀಪದಲ್ಲೇ ನಾಡ ಬಂದೂಕು ಹಾಗೂ ಮೂರು ಮದ್ದುಗುಂಡುಗಳು  ಪತ್ತೆಯಾಗಿದ್ದವು. ಹೈದರಲಿ ಧರಿಸಿದ್ದ ಹೆಲ್ಮೆಟ್ ನಲ್ಲಿ ಮದ್ದುಗುಂಡು ನುಸುಳಿದ ದ್ವಾರ ಪತ್ತೆಯಾಗಿದೆ. 

ಬಂದೂಕಿನಲ್ಲಿ ಮದ್ದು ಗುಂಡು ತುಂಬಿಸಿ ಅಜಾಗ್ರತೆಯಿಂದ ಸ್ಕೂಟರ್ ಚಲಾಯಿಸುತ್ತಿದ್ದಾಗ ದುರಂತ ಸಂಭವಿಸಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ.  ಹೈದರಲಿ  ಬೇಟೆಗಾರ ರೊಂದಿಗೂ ತೆರಳುತ್ತಿದ್ದರೆಂದು ಪೊಲೀಸರಿಗೆ ಮಾಹಿತಿ ಲಭಿಸಿರುವುದಾಗಿ ತಿಳಿದುಬಂದಿದೆ. ಇದೇ ವೇಳೆ ಬಂದೂಕು ಇವರಿಗೆ ಎಲ್ಲಿಂದ ಲಭಿಸಿದೆಯೆಂಬ ಕುರಿತು ಆದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳ ಅರಣ್ಯ ಪ್ರದೇಶ ವ್ಯಾಪ್ತಿಗೊಳಪಟ್ಟುದುದರಿಂದ ಅರಣ್ಯ ಇಲಾಖೆಯೂ ತನಿಖೆ ಆರಂಭಿಸಿದೆ.  ಆದೂರು ಸಿಐ ಇ. ಅನೂಬ್ ಕುಮಾರ್, ಎಸ್‌ಐ ಕೆ. ಶರತ್ ನೇತೃತ್ವದಲ್ಲಿ  ಪೊಲೀಸರು ಹಾಗೂ ಅರಣ್ಯಇಲಾಖೆ ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.

RELATED NEWS

You cannot copy contents of this page