ಕುಂಬಳೆ: ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ ಮೂವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಬಂದ್ಯೋಡಿನಲ್ಲಿ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆ ವೇಳೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಂತೆ ಬಾಲಕನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಾಲಕ ಮೊಗ್ರಾಲ್ ನಿರೋಳಿ ನಿವಾಸಿ ಅಹಮ್ಮದ್ ಅಫಲ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದ. ಇದೇ ರೀತಿ ಶಿರಿಯ ಕುನ್ನಿಲ್‌ನಲ್ಲೂ ನಿನ್ನೆ ಬಾಲಕನೋರ್ವ ಚಲಾಯಿಸುತ್ತಿದ್ದ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅದರ ಮಾಲಕ ಇಚ್ಚಿಲಂಗೋಡು ಪಚ್ಚಂಬಳದ ಮುಹಮ್ಮದ್ ಜೆಬೀಲ್ ಎಂಬಾತನ ವಿರುದ್ಧ ಪ್ರಕgಣ ದಾಖಲಿಸಿಕೊಂಡಿದ್ದಾರೆ. ಇದೇ ಸ್ಥಳದಲ್ಲಿ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಪ್ರಾಯಪೂರ್ತಿಯಾಗದ ಬಾಲಕ ಚಲಾಯಿಸುತ್ತಿದ್ದ ಕಾರನ್ನು ವಶಪಡಿಸಿ ಅದರ ಮಾಲಕ ಉಪ್ಪಳ ಪಚ್ಲಂಪಾರೆಯ ಮೂಸಾಕುಂಞಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.






