ಬದಿಯಡ್ಕ: ನಕಲಿ ದಾಖಲುಪತ್ರ ಗಳನ್ನು ಅಸಲಿ ದಾಖಲುಪತ್ರದ ರೂಪದಲ್ಲಿ ಉಪಯೋಗಿಸಿ ಜಮಾ ಯತ್ ಸಮಿತಿಯ ಕಾರ್ಯದರ್ಶಿ ಎಂಬ ಹೆಸರಲ್ಲಿ ಜ್ಯಾರಿಯಲ್ಲಿರುವ ಕಾರ್ಯದರ್ಶಿಯಾಗಿದ್ದೇನೆಂಬ ರೀತಿಯಲ್ಲಿ ವ್ಯಕ್ತಿಪಲ್ಲಟಗೊಳಿಸಿ ವಕ್ಫ್ ಮಂಡಳಿಗೆ 2025 ಮೇ 16ರಲ್ಲಿ ನಕಲಿ ದೂರು ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏತಡ್ಕ ಬೆಳಿಂಜೆ ಬದರ್ ಜುಮಾ ಮಸೀದಿಯ ಅಬ್ದುಲ್ಲ ಜಿ.ಬಿ ಎಂಬವರು ಈ ಬಗ್ಗೆ ಮೊದಲು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯನೀಡಿದ ನಿರ್ದೇಶ ಪ್ರಕಾರ ಪೊಲೀಸರು ಅಹಮ್ಮದ್ ಮುಸ್ತಫಾ ಎಂಬವರ ವಿರುದ್ಧ ಈ ಪ್ರಕರಣ ದಾಖಲಿ ಸಿಕೊಂಡಿದ್ದಾರೆ.






