ಕಾಸರಗೋಡು: ಚಟ್ಟಂಚಾಲ್ ಪೇಟೆಯ ತರಕಾರಿ ಅಂಗಡಿಯಿಂದ ಹಾಡಹಗಲೇ 15,000 ರೂ. ಒಳ ಗೊಂಡ ಪರ್ಸ್ ಕಳವು ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕಾರ್ಯಾಚರಿಸುವ ಕೆವಿಕೆ ವೆಜಿಟೇ ಬಲ್ಸ್ ಎಂಬ ಅಂಗಡಿಯಿಂದ ಕಳವು ನಡೆಸಲಾಗಿದೆ. ಅಂಗಡಿಯ ನೌಕರ ನಾದ ನಾಸರ್ನ ಹಣವನ್ನು ಕಳವು ನಡೆಸಲಾಗಿದೆ. ಅಲ್ಯುಮೀನಿಯಂ ಫ್ಯಾಬ್ರಿಕೇಶನ್ ಕೆಲಸ ಗಾರನಿಗೆ ನೀಡಲು ತೆಗೆದಿರಿಸಿದ ಹಣವಾಗಿತ್ತು ಕಳವುಹೋದ ಹಣ. ನಿನ್ನೆ ಸಂಜೆ ಘಟನೆ ನಡೆದಿದ್ದು, ಸಾಮಗ್ರಿಗಳನ್ನು ಖರೀದಿಸಲೆಂಬ ನೆಪದಲ್ಲಿ ತಲುಪಿದ ಓರ್ವ ಕಳವು ನಡೆಸಿರುವುದಾಗಿ ಶಂಕಿಸಲಾಗಿದೆ. ಅಂಗಡಿಯಲ್ಲಿ ಬಹಳ ಹೊತ್ತು ನಿಂತಿದ್ದ ಬಳಿಕ ಕಪಾಟಿನಲ್ಲಿರಿ ಸಿದ್ದ ಬರ್ಸ್ ಈತ ಕಳವು ಗೈದಿದ್ದಾನೆ. ಇದರ ದೃಶಗಳು ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಮಾಹಿತಿ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಕಳವಿನ ಬಳಿಕ ಈತ ಕಾಸರಗೋಡು ಭಾಗಕ್ಕಿರುವ ಬಸ್ನಲ್ಲಿ ಹತ್ತಿ ತೆರಳಿರಬೇಕೆಂದು ಶಂಕಿಸಲಾಗಿದೆ.






