ಕುಂಬಳೆ: ಬಿರಿಯಾನಿಯೊಂದಿಗೆ ಕಚ್ಚಂಬರ್ ಲಭಿಸದ ದ್ವೇಷದಿಂದ ಕ್ಯಾಟರಿಂಗ್ ನೌಕರರಿಗೆ ಹಲ್ಲೆಗೈದಿರುವುದಾಗಿ ದೂರುಂಟಾಗಿದೆ. ಪೇರಾಲ್ ಕಣ್ಣೂರು ನಿವಾಸಿ ಹಾಗೂ ಜೊತೆಗೆ ಕೆಲಸಕ್ಕೆ ತಲುಪಿದ ಯುವಕನಿಗೆ ಹಲ್ಲೆಗೈಯ್ಯಲಾಗಿದೆ. 21ರ ಹರೆಯದ ಯುವಕನ ದೂರಿನಂತೆ ಅಬ್ಬಾಸ್, ಮಶೂದ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ಸಂಜೆ 3 ಗಂಟೆಗೆ ಸೀತಾಂಗೋಳಿಯ ಆಡಿಟೋರಿಯಂವೊಂದರಲ್ಲಿ ಘಟನೆ ನಡೆದಿದೆ. 21ರ ಹರೆಯದ ಯುವಕ ವಿದ್ಯಾರ್ಥಿಯಾಗಿದ್ದಾನೆ.
ಶಿಕ್ಷಣಕ್ಕೆ ಹಣ ಕಂಡುಕೊಳ್ಳುವ ಉದ್ದೇಶದಿಂದ ಈತ ಆದಿತ್ಯವಾರಗಳಂದು ಆಹಾರ ವಿತರಣೆ ಕೆಲಸಕ್ಕೆ ತೆರಳುತ್ತಿರುವುದಾಗಿ ಹೇಳಲಾಗುತ್ತಿದೆ. ಆದಿತ್ಯವಾರ ನಡೆದ ಮದುವೆಯ ಕ್ಯಾಟರಿಂಗ್ ಕೆಲಸವನ್ನು ದೂರುಗಾರ ವಹಿಸಿಕೊಂಡಿದ್ದನು. ಅಂದು 3 ಗಂಟೆ ವೇಳೆ ಕಚ್ಚಂಬರ್ ಮುಗಿದಿತ್ತೆನ್ನಲಾಗಿದೆ. ಆಹಾರ ಸೇವಿಸುತ್ತಿದ್ದ ಮಧ್ಯೆ ಆರೋಪಿಗಳಾದ ಇಬ್ಬರು ಕಚ್ಚಂಬರ್ ಕೇಳಿದ್ದರು. ಆದರೆ ಅದು ಮುಗಿಯಿತೆಂದು ತಿಳಿಸಿದಾಗ ನೌಕರರಿಗೆ ನಿಂದಿಸಿ ಹಲ್ಲೆಗೈದಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.







