ಹೊಸದುರ್ಗ: ತಲೆಮರೆಸಿ ಕೊಂಡಿದ್ದ ಕಾಪಾ ಪ್ರಕರಣ ಸಹಿತ ಕುಖ್ಯಾತ ಅಪರಾಧಿ, ಮಾದಕ ಪದಾರ್ಥ ವ್ಯಾಪಾರಿಯಾಗಿದ್ದ ಆರೋಪಿಯನ್ನು ಅಂಬಲತ್ತರ ಪೊಲೀಸರು ಸೆರೆ ಹಿಡಿದು ಜೈಲಿಗಟ್ಟಿದರು. ೭ನೇ ಮೈಲು ಕಾಯಲಡ್ಕಂ ನಿವಾಸಿ ರಂಶೀದ್ ಅಲಿಯಾಸ್ ಕಿಚ್ಚು 33)ನನ್ನು ಸೆರೆ ಹಿಡಿಯಲಾಗಿದೆ. ಕಾಪಾ ಹೇರಿದ ಹಿನ್ನೆಲೆಯಲ್ಲಿ ಈತ ಪರಾರಿಯಾಗಿ ವಿದೇಶದಲ್ಲಿದ್ದನು.
ಆ ಬಳಿಕ ಬೆಂಗಳೂರಿಗೆ ತಲುಪಿ ರೈಲು ಮೂಲಕ ಕಾಞಂಗಾಡ್ ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಈತನನ್ನು ಸೆರೆ ಹಿಡಿಯಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರಿಗೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಬೇಕಲ ಡಿವೈಎಸ್‌ಪಿ ಮನೋಜ್ ಪಿ.ವಿ.ಯವರ ನೇತೃತ್ವದಲ್ಲಿ ಅಂಬಲತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶೈನ್ ಕೆ.ಪಿ., ಪ್ರಮೋದ್ ಪಿ.ವಿ, ಪ್ರಜಿತ್, ರಿಜು ಕೆ, ರತೀಶ್, ರತೀಶ್ ತೋಯಮ್ಮಲ್, ಸಂತೋಷ್ ಎಂಬಿವರು ಸೇರಿ ಸೆರೆಹಿಡಿದಿದ್ದಾರೆ.