ನೀರ್ಚಾಲು: ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 143ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಡಾ. ವಾಣಿಶ್ರೀ ಕಾಸರಗೋಡು ನಿರೂಪಿಸಿದರು. ಗಾನಾಮೃತ ಕಾರ್ಯಕ್ರಮದಲ್ಲಿ ಮೇ ಘರಾಜ್ ಆಚಾರ್ಯ ಹಾಡಿದರು. ಸಂಸ್ಥೆಯ ಸಾಧಕಿ ಪ್ರೀತಿಕಾ ಪ್ರಸಾದ್ ಅವರಿಂದ ರಿಂಗ್ ನೃತ್ಯ ಜರಗಿತು. ಪುಟಾಣಿ ಸಾಧಕಿ ಮಾನ್ವಿಸಾಗರ್ ಯೋಗ ನೃತ್ಯ ಕಾರ್ಯಕ್ರಮಕ್ಕೆ ರಂಗು ನೀಡಿತು. ಸಂಸ್ಥೆಯ ಶ್ರೇಯ ಸೂರ್ಯ, ಭವಿಷ್ಯ, ವಿಸ್ಮಯ, ಲಕ್ಷ್ಮಿ ಪ್ರಿಯ, ಹರ್ಷಿಕ, ಪ್ರಿತ್ವಿಕ, ವಿನ್ಯ, ಪ್ರಜ್ಞಾ ಬಹುವಿಧ ಪ್ರಕಾರಗಳ ನೃತ್ಯ ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ರನ್ನು ಅಭಿನಂದಿಸಿದರು. ಭಾಗವ ಹಿಸಿದ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿ ಸಲಾಯಿತು. ಮಂದಿರದ ಕೋಶಾದಿ üಕಾರಿ ಸುಬ್ರಹ್ಮಣ್ಯ ಭಟ್, ಅಚ್ಯುತ ಭಟ್,ಪ್ರೇಮಲತಾ, ಚೈತ್ರಾ ಗುರು ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.






