ಮಂಜೇಶ್ವರ: ಕೆಲಸದ ಮಧ್ಯೆ ಮೇಲಿನಿಂದ ಬಿದ್ದು ಸೆಂಟ್ರಿAಗ್ ಕಾರ್ಮಿಕ ಮೃತಪಟ್ಟ ಘಟನೆ ನಿನ್ನೆ ಮಜಿಬೈಲ್ನಲ್ಲಿ ನಡೆದಿದೆ. ಕಿದೂರು ಪಾದೆಕಲ್ಲು ನಿವಾಸಿ ದಿ| ಬಾಬು ಪೂಜಾರಿ ಎಂಬವರ ಪುತ್ರ ಸುರೇಶ್ (49) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮಜಿಬೈಲ್ನಲ್ಲಿ ವ್ಯಕ್ತಿಯೋರ್ವರ ನೂತನ ಮನೆಗೆ ಕಾಂಕ್ರೀಟ್ ನಿರ್ಮಾಣಕ್ಕಾಗಿ ಹಲಗೆ ಹಾಕುವ ಕೆಲಸವನ್ನು ಮಾಡುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಇವರನ್ನು ಕೂಡಲೇ ಜೊತೆಯಲ್ಲಿದ್ದ ಕಾರ್ಮಿಕರು ಹೊಸಂಗಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಷ್ಟರಲ್ಲಿ ಮೃತಪಟ್ಟಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿ ಮೃತದೇಹ ಇರಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರು ತಾಯಿ ಗಿರಿಜ, ಪತ್ನಿ ದಿವ್ಯ, ಪುತ್ರಿ ಆರುಷಿ, ಸಹೋದರ ಸಹೋದರಿಯರಾದ ಮಹಾಲಿಂಗ, ಅಶೋಕ, ಶಾರದ, ನಾರಾಯಣ, ಕೃಷ್ಣ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






