ಕೇರಳದಲ್ಲಿ ಬಿಜೆಪಿಗೆ  ಇಷ್ಟವಿರುವ ಕೇಂದ್ರ ಯೋಜನೆಗಳನ್ನು ಶೀಘ್ರ ಜ್ಯಾರಿಗೊಳಿಸಲಾಗುತ್ತಿದೆ-ಕೆ.ಸಿ. ವೇಣುಗೋಪಾಲ್

ಕುಂಬಳೆ: ಬಿಜೆಪಿಗೆ ಇಷ್ಟವಿರುವ ಕೇಂದ್ರ ಯೋಜನೆಗಳನ್ನು ಬಹುಬೇ ಗನೆ ಕೇರಳದಲ್ಲಿ  ಜ್ಯಾರಿಗೊಳಿಸಲಾಗುತ್ತಿದೆ. ಇದು ಸಿಪಿಎಂ ಹಾಗೂ ಬಿಜೆಪಿ ಮಧ್ಯೆ ಹಲವು ವರ್ಷಗಳಿಂದ ಮುಂದುವರಿಯುತ್ತಿರುವ ಅಪವಿತ್ರ ಮೈತ್ರಿ ಕೂಟದ ಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಕುಂಬಳೆಯಲ್ಲಿ   ತ್ರಿಸ್ತರ ಪಂಚಾಯತ್ ಚುನಾವಣೆಯ ಸಂಬಂಧ ನಡೆದ  ಯುಡಿಎಫ್ ಅಭ್ಯರ್ಥಿಗಳ ಸಂಗಮ ಹಾಗೂ ಸಾರ್ವಜನಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇ.ಡಿಯಿಂದ ಸಾವಿರ ನೋಟೀಸು ಲಭಿಸಿದರೂ ಸಿಪಿಎಂ ಭಯಪಡದು. ಶಬರಿಮಲೆಯ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ  ಮೌನ ವಹಿಸುತ್ತಿದೆಯೆಂದೂ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಚಿವ ಸಮೀರ್ ಅಹಮ್ಮದ್ ಖಾನ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಶಾಜಿ, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಇಸ್ಮಾಯಿಲ್ ವಯನಾಡ್, ಕಲ್ಲಟ್ರ ಮಾಹಿನ್, ಟಿ.ಎ.ಮೂಸ, ಮಂಜುನಾಥ ಆಳ್ವ, ನೀಲಕಂಠನ್, ಎಂ. ಅಬ್ಬಾಸ್, ಹಾದಿ ತಂಙಳ್ ಮಾತನಾಡಿದರು.  ಗ್ರಾಮ, ಬ್ಲೋಕ್, ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳನ್ನು ನೇತಾರರು ಶಾಲು ಹೊದೆಸಿ ಸ್ವಾಗತಿಸಿದರು.

RELATED NEWS

You cannot copy contents of this page