ಕಾಸರಗೋಡು: ಬೀದಿ ನಾಯಿ ಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪ ಡಿಸಲು ಮುಳಿಯಾರಿನಲ್ಲಿ ಸ್ಥಾಪಿಸಿದ ಎಬಿಸಿ ಕೇಂದ್ರ ತಂಡ ಇಂದು ಸಂದರ್ಶಿ ಸಲಿದೆ. ಕೇಂದ್ರದ ಚಟುವಟಿಕೆಗೆ ಅಗತ್ಯದ ಅನುಮತಿ ಲಭಿಸಲು ರಾಷ್ಟ್ರೀಯ ಮೃಗ ಕ್ಷೇಮ ಮಂಡಳಿಯ ಪ್ರತ್ಯೇಕ ಪರಿಶೀಲನೆಗಾಗಿ ಕೇಂದ್ರ ತಂಡ ಇಲ್ಲಿಗೆ ಆಗಮಿಸಲಿದೆಯೆಂದು ತಿಳಿದುಬಂದಿದೆ. ಈ ತಂಡದ ಪರಿಶೀಲನೆ ಬಳಿಕ ಅನುಮತಿ ಲಭಿಸಿದರೆ ಮಾತ್ರವೇ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬಹು ದಾಗಿದೆ. ಬೀದಿ ನಾಯಿಗಳ ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ ಎಬಿಸಿ ಕೇಂದ್ರದ ಚಟುವಟಿಕೆ ಆರಂಭಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
