ಬದಿಯಡ್ಕ: ಯುವಕನೋ ರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೇಡಿಕಾನ ನಿವಾಸಿ ದಿ| ಮುರಳಿ ಎಂಬವರ ಪುತ್ರ ಸುಮಂತ್ ಕುಮಾರ್ (25 ಸಾವಿಗೀಡಾದ ಯುವಕ. ಮನೆ ಸಮೀಪದ ಹಿತ್ತಿಲಲ್ಲಿ ನಿನ್ನೆ ಸಂಜೆ ವೇಳೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಸುಮಂತ್ ಕುಮಾರ್ ಸೆಂಟ್ರಿಂಗ್ ಕಾರ್ಮಿಕನಾಗಿದ್ದರು. ಕಳೆದ ಮೂರು ದಿನಗಳಿಂದ ಕೆಲಸಕ್ಕೆ ತೆರಳದೆ ಇವರು ಮನೆಯಲ್ಲೇ ಇದ್ದರು. ಆದರೆ ನೇಣು ಬಿಗಿದು ಸಾವಿಗೀಡಾಗಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತರು ತಾಯಿ ಸುಂದರಿ, ಸಹೋದರ ಸುಶಾಂತ್, ಸಹೋದರಿ ಸುಶ್ಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
