ಕುಂಬಳೆ: ಕಾಪಾ ಕಾಯ್ದೆ ಉಲ್ಲಂಘಿಸಿ ಜಿಲ್ಲೆಗೆ ಅನಧಿಕೃತವಾಗಿ ತಲುಪಿ ಸರ ಅಪಹರಣ ನಡೆಸಿದ ವ್ಯಕ್ತಿ ವಿರುದ್ಧ ಕುಂಬಳೆ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬಂದ್ಯೋಡು ಅಡ್ಕ ವೀರನಗರದ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29) ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಬೇರೆ ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಲಾಗಿತ್ತು. ಇದರಂತೆ 2025 ಜನವರಿ 31 ರಿಂದ ಒಂದು ವರ್ಷ ಕಾಲ ಜಿಲ್ಲೆಗೆ ಪ್ರವೇಶಿಸುವುದಕ್ಕೆ ಈತನಿಗೆ ನಿಷೇಧ ಹೇರಲಾಗಿತ್ತು. ಅದನ್ನು ಉಲ್ಲಂಘಿಸಿ ಇತ್ತೀಚೆಗೆ ಜಿಲ್ಲೆಗೆ ಬಂದ ಅಬ್ದುಲ್ ಲತೀಫ್ ಅರಿಬೈಲ್ ನಿವಾಸಿ ಮೊರತ್ತಣೆಯಲ್ಲಿ ಕೋಳಿ ಅಂಗಡಿ ಮಾಲಕನಾಗಿರುವ ಸಾನ್ವಿತ್ ಯಾನೆ ಸೀತಾರಾಮ ಶೆಟ್ಟಿ 33)ರಿಗೆ ಬೆದರಿಕೆಯೊಡ್ಡಿ ಚಿನ್ನದ ಸರ ಅಪಹರಿಸಿದ್ದನು. ಈ ಸಂಬಂಧ ಕಾಪಾ ಕಾಯ್ದೆ ಉಲ್ಲಂಘಿಸಿ ಜಿಲ್ಲೆಗೆ ತಲುಪಿದ ಆರೋಪದಂತೆ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ವ್ಯಾಪಾರಿಯ ಸರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿ ರುವ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
