ರಾಜ್ಯ ಶಾಲಾ ಗೇಮ್ಸ್: ಚಟ್ಟಂಚಾಲ್ ಶಾಲೆ ವಿದ್ಯಾರ್ಥಿಗೆ ಚಿನ್ನದ ಪದಕ

ಕಣ್ಣೂರು: ಕಣ್ಣೂರಿನಲ್ಲಿ ನಿನ್ನೆ ಸಮಾಪ್ತಿಗೊಂಡ 67ನೇ ರಾಜ್ಯ ಶಾಲಾ ಗೇಮ್ಸ್‌ನಲ್ಲಿ ಪೊಯಿನಾಚಿ ಪರಂಬ್‌ನ ದಕ್ಷದೇವಾನಂದನಿಗೆ ಚಿನ್ನದ ಪದಕ ಲಭಿಸಿದೆ. ಈತ ಚಟ್ಟಂಚಾಲ್ ಶಾಲೆಯ 11ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಅಂಡರ್ 78 ಕಿಲೋ ವಿಭಾಗದಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ ಕೇರಳದ ಪರವಾಗಿ ದಕ್ಷದೇವಾನಂದ್ ಸ್ಪರ್ಧಿಸಲಿದ್ದಾನೆ. 19 ವರ್ಷಕ್ಕಿಂತ ಕೆಳಪ್ರಾಯದ ಹುಡುಗರ ಅಂಡರ್ 78 ಕಿಲೋ ವಿಭಾಗದಲ್ಲಿ ಈತನಿಗೆ ಚಿನ್ನದ ಪದಕ ಲಭಿಸಿದೆ. ಕಳೆದ ವರ್ಷವೂ ಈತ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿ ಸಿದ್ದನು.  ಶಿಕ್ಷಣದಲ್ಲೂ ಮುಂದಿರುವ ಈತ  10ನೇ ತರಗತಿ ಪರೀಕ್ಷೆ ಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದಿದ್ದನು. ಕಳೆದ 6 ವರ್ಷದಿಂದ ಪೊಯಿನಾಚಿ ತೈಕೋಂಡಾ ಅಕಾಡೆಮಿಯ ಆರ್. ಪ್ರಿಯೇಶ್‌ರಿಂದ ಈತ ತೈಕೋಂಡಾ ತರಬೇತಿ ಪಡೆಯುತ್ತಿದ್ದಾನೆ. ಪರಂಬ್ ಕೈರಳಿ ನಗರದ ಜಯರಾಮನ್-ಶಾಲಿನಿ ದಂಪತಿಯ ಪುತ್ರನಾಗಿದ್ದಾನೆ. ಸಚಿತ್‌ದೇವ ಈತನ ಸಹೋದರನಾಗಿದ್ದಾನೆ.

You cannot copy contents of this page