ಕಾಸರಗೋಡು: ಜದೀದ್ ರೋಡ್ ನಿವಾಸಿಯೂ ಚೆಂಗಳ ನಾಲ್ಕನೇ ಮೈಲಿನಲ್ಲಿ ವಾಸಿಸುತ್ತಿದ್ದ ಮುಹಮ್ಮದ್ ಹನೀಫ್ ಕೊಟ್ಟ ಯಾಡಿ (50) ನಿಧನ ಹೊಂದಿದರು. ಇವರು ಅನಿವಾಸಿಯಾಗಿದ್ದರು. ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಒಂದೂವರೆ ತಿಂಗಳ ಹಿಂದೆ ಚೆನೈಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ದಿ| ಕೊಟ್ಟಯಾಡಿ ಅಬ್ದುಲ್ಲ- ಬೀಫಾತ್ತಿಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಸುಮಯ್ಯಪಳ್ಳಿಕ್ಕಾಲ್, ಪುತ್ರಿ ಫಾತಿಮತ್ ಫಿದ (ಮೆಡಿಕಲ್ ವಿದ್ಯಾರ್ಥಿನಿ), ಸಹೋದರ- ಸಹೋದರಿಯರಾದ ಅಹಮ್ಮದ್ ಕೊಟ್ಟಯಾಡಿ, ಮೊಹಮ್ಮದ್ ಶಾಫಿ, ಇಕ್ಬಾಲ್, ಖದೀಜ, ನಫೀಸ, ಮೈಮೂನ, ಸೈನಬ, ಸಾಹಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಆಯಿಶ ಈ ಹಿಂದೆ ನಿಧನ ಹೊಂದಿದ್ದಾರೆ.
