ಕಾಸರಗೋಡು: ಸಾಮಾನ್ಯವಾಗಿ ಶಬರಿಮಲೆ ತೀರ್ಥಾಟನೆ ಸಮಯದಲ್ಲಿ ಬೆಲೆ ಕಡಿಮೆಯಾಗಲಿರುವ ಕೋಳಿ ಮಾಂಸಕ್ಕೆ ನಕಲಿ ಕ್ಷಾಮ ಸೃಷ್ಟಿಸುತ್ತಿರುವುದಾಗಿ ಗ್ರಾಹಕರು ಆರೋಪಿಸುತ್ತಾರೆ. ಈಗ ಕೋಳಿ ಮಾಂಸದ ಬೆಲೆ 150 ರೂ. ದಾಟಿದೆ. ಕಳೆದ ವಾರ ಕೋಳಿ ಮಾಂಸಕ್ಕೆ 115ರಿಂದ 130 ರೂ. ವರೆಗಿದ್ದ ಬೆಲೆ ದಿಢೀರ್ ಆಗಿ 150ಕ್ಕೇರಿದೆ. ತಮಿಳುನಾಡಿನಿಂದ ಅಗತ್ಯಕ್ಕೆ ಕೋಳಿ ತಲುಪುತ್ತಿಲ್ಲವೆಂದು ರಖಂ ವ್ಯಾಪಾರಿ ಗಳು ತಿಳಿಸುತ್ತಾರೆ. ಆದರೆ ಚಿಲ್ಲರೆ ಮಾರಾಟ ವ್ಯಾಪಾರಿಗಳು ಇದನ್ನು ಅಂಗೀಕರಿಸುತ್ತಿಲ್ಲ. ರಖಂ ವ್ಯಾಪಾರಿಗಳು ಮನಪೂರ್ವಕ ಉಂಟುಮಾಡು ತ್ತಿರುವ ಬೆಲೆಯೇರಿಕೆ ಇದಾಗಿದೆಯೆಂದು ಗ್ರಾಹಕರು ಆರೋಪಿಸುತ್ತಾರೆ. ಸಾಮಾನ್ಯವಾಗಿ ಶಬರಿಮಲೆ ತೀರ್ಥಾ ಟನೆ ಕಾಲಾವಧಿಯಲ್ಲಿ ಮಾಂಸ ಕೋಳಿ ಬೆಲೆ ಕುಸಿಯುವುದು ಕಂಡುಬರುತ್ತದೆ. ಆದರೆ ಈ ಬಾರಿ ಮಾತ್ರ ಬೆಲೆ ಹೆಚ್ಚಿಸಲು ರಖಂ ವ್ಯಾಪಾರಿಗಳು ಯತ್ನಿಸುತ್ತಿದ್ದಾರೆನ್ನಲಾಗಿದೆ. ಮುಂದೆ ಬರಲಿರುವ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಮತ್ತೂ ಬೆಲೆ ಹೆಚ್ಚಿಸಲಿರುವ ತಂತ್ರವಿದೆಯೆಂದು ಆರೋಪ ಕೇಳಿಬರುತ್ತಿದೆ. ಹಾಗಾದರೆ ಮಾಂಸದ ಬೆಲೆ ಇನ್ನೂ ಹೆಚ್ಚಳಿದೆ ಎಂದು ಚಿಲ್ಲರೆ ಮಾರಾಟಗಾರರು ತಿಳಿಸುತ್ತಾರೆ. ತರಕಾರಿ ಹಾಗೂ ಕೋಳಿ ಮಾಂಸದ ಬೆಲೆ ತಮಗಿಷ್ಟಬಂದ ರೀತಿಯಲ್ಲಿ ಹೆಚ್ಚಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಲು ಸರಕಾರ ಮುಂದಾಗುತ್ತಿಲ್ಲವೆಂದು ಜನರು ನುಡಿಯುತ್ತಾರೆ.






