ಕಣ್ಣೂರು: ತಂದೆ ಹಿಂದಕ್ಕೆ ಚಲಾಯಿಸಿದ ಕಾರಿನಡಿಗೆ ಬಿದ್ದು ಒಂ ದೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಣ್ಣೂರಿನ ತಯ್ಯಿಲ್ ಎಂಬಲ್ಲಿ ಸಂಭವಿಸಿದೆ. ತಯ್ಯಿಲ್ ಕುರುವ ರೋಡ್ ಸಮೀಪ ಸೈನ್ ಹೌಸ್‌ನ ಹೂರಿನ್ ಮೆಹ ಬೂಬಿ ಎಂಬ ಹೆಣ್ಣು ಮಗು ಮೃತಪಟ್ಟ ದುರ್ದೈವಿ. ನಿನ್ನೆ ಬೆಳಿಗ್ಗೆ ಮನೆಯಂಗಳದಲ್ಲಿ ಕಾರನ್ನು ತಿರುಗಿ ಸಲು ತಂದೆ ಯತ್ನಿಸಿದಾಗ ಮಗು ಅಲ್ಲಿಗೆ ಓಡಿದ್ದು, ಆದರೆ ಅದನ್ನು ತಂದೆ ಕಂಡಿರಲಿಲ್ಲ. ಈ ವೇಳೆ ಕಾರಿ ನಡಿಗೆ ಬಿದ್ದು ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಘಟನೆಗೆ ಸಂಬಂಧಿಸಿ ಅಜಾ ಗ್ರತೆಯಿಂದ ವಾಹನ ಚಲಾಯಿಸಿದ ಆರೋಪದಂತೆ ಮಗುವಿನ ತಂದೆ ಶಫ್‌ಕತ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತ ಮಗು ತಾಯಿ ಶಹಮ, ಸಹೋದರಿ ಹೆಸ್ಲಿನ್ ಮೊದಲಾದವರನ್ನು ಅಗಲಿದ್ದಾಳೆ.






