ಕಾಸರಗೋಡು: ಮಕ್ಕಳು ಸನಾತನ ಧರ್ಮದ ಬೆನ್ನೆಲುಬಾಗಿ ಬೆಳೆಯಬೇ ಕೆಂದು ಹಿಂದೂ ಐಕ್ಯವೇದಿ ರಾಜ್ಯ ರಕ್ಷಾಧಿಕಾರಿ ಕೆ.ಪಿ. ಶಶಿಕಲಾ ಟೀಚರ್ ಕರೆನೀಡಿದ್ದಾರೆ. ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗವಾಗಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸನಾತನ ಧರ್ಮವನ್ನು ಇತಿಶ್ರೀಗೊಳಿಸುವ ರೀತಿಯ ಯತ್ನಗಳು ಕೇರಳದಲ್ಲಿ ಹಲವು ವರ್ಷಗಳಿಂದಲೇ ಆರಂಭಗೊಂಡಿದೆ. ವಿವಾದಗಳನ್ನು ಸೃಷ್ಟಿಸಿ ಸನಾತನ ಧರ್ಮ ಇಲ್ಲದಾಗಿಸುವ ಯತ್ನ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀ ಗುರುವಾಯೂರು ಕ್ಷೇತ್ರದ ವಿಷಯದಲ್ಲಿ ಈ ರೀತಿಯ ವಿವಾದಗಳನ್ನು ಸೃಷ್ಟಿಸುವ ಯತ್ನ ನಡೆಸಲಾಗಿತ್ತು. ಇದೆಲ್ಲಾ ಸನಾತನ ಧರ್ಮವನ್ನು ನಾಶಗೊಳಿಸಲು ನಡೆಸಲಾಗುತ್ತಿರುವ ನಿಗೂಢ ರೀತಿಯ ಯತ್ನಗಳಾಗಿವೆ. ಪಂಪಾದಲ್ಲಿ ನಡೆಸಲು ತೀರ್ಮಾನಿಸಲಾಗಿರುವ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮದಲ್ಲೂ ಇಂತಹ ಉದ್ದೇಶ ಅಡಗಿದೆ. ಸನಾತನ ಧರ್ಮವನ್ನು ಇಲ್ಲದಾಗಿಸಲು ಜಾತಿ ಮತ್ತು ಅಕ್ರಮ ರಾಜಕೀಯವನ್ನೂ ಬಳಸುವಸಾಧ್ಯತೆ ಇದೆ. ಅದಕ್ಕೆ ಸುತರಾಂ ಆಸ್ಪದ ನೀಡಬಾರದು. ದೇವರ ಮುಂದೆ ಎಲ್ಲರೂ ಸಮಾನರು. ಇದರಲ್ಲಿ ಯಾವುದೇ ಬೇಧ ಭಾವಗಳಿಲ್ಲ. ಆದ್ದರಿಂದ ಬೆಳೆಯುತ್ತಿರುವ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅರಿವು ಹಾಗೂ ಜ್ಞಾನ ಮೂಡಿಸುವ ಕೆಲಸಗಲು ನಡೆಯಬೇಕಾಗಿದೆಯೆಂದು ಶಶಿಕಲಾ ಟೀಚರ್ ಹೇಳಿದರು.
ಸಪ್ತತಿ ಮಹೋತ್ಸವದ ರಕ್ಷಾಧಿ ಕಾರಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ, ಮಂಗಳೂ ರಿನ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕೆ.ಆರ್. ಮನೋಜ್ ಕುಮಾರ್, ನ್ಯಾಯವಾದಿ ಎಂ. ನಾರಾ ಯಣ ಭಟ್ ಮೊದಲಾ ದವರು ಮಾತ ನಾಡಿದರು. ಹಲವರು ಉಪಸ್ಥಿತರಿದ್ದರು.