ಚುನಾವಣೆ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಪರೀಕ್ಷೆಯಲ್ಲಿ ಬದಲಾವಣೆ ಸಾಧ್ಯತೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ  ಹಿನ್ನೆಲೆಯಲ್ಲಿ ರಾಜ್ಯದ ಸಾರ್ವತ್ರಿಕ ಶಿಕ್ಷಣ ಸಂಸ್ಥೆಗಳ ಕ್ರಿಸ್ಮಸ್ ಪರೀಕ್ಷೆಗಳ ದಿನಾಂಕಗಳಲ್ಲಿ ಬದಲಾವಣೆ ಯಾಗಲಿದೆ. ಅಕಾಡೆಮಿಕ್ ಕ್ಯಾಲೆಂಡರ್ ಅನುಸಾರ ದ. 11ರಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗುವುದಾದರೂ  9, 11ರಂದುಮತದಾನ, 13ರಂದು ಮತ ಎಣಿಕೆ ಘೋಷಿಸಿದ ಹಿನ್ನೆಲೆಯಲ್ಲಿ ದಶಂಬರ ಪ್ರಥಮ ವಾರದಲ್ಲೇ ಪರೀಕ್ಷೆ ನಡೆಸಲು ಸಾಧ್ಯತೆ ಇದೆ.

ಚುನಾವಣೆಗೆ  ಮುಂಚಿತ ಹಾಗೂ ಬಳಿಕ ಎಂಬ ರೀತಿಯಲ್ಲಿ ಎರಡು ಹಂತಗಳಲ್ಲಾಗಿ ಪರೀಕ್ಷೆ ನಡೆಸಬಹುದೇ ಎಂಬ ಬಗ್ಗೆಯೂ ಚಿಂತಿಸಲಾಗುತ್ತಿದೆ. ಶಿಕ್ಷಣ ಗುಣಮಟ್ಟ ಅವಲೋಕನ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಉಂಟಾಗಲಿದೆ. ಮತದಾನ ಕೇಂದ್ರಗಳಲ್ಲಿ ಹೆಚ್ಚಿನವು ಶಾಲೆಗಳಾಗಿದ್ದು ಅಧ್ಯಾಪಕರು ಚುನಾವಣಾ ಕರ್ತವ್ಯದಲ್ಲೂ ಇದ್ದಾರೆ. ಈ ಹಿನ್ನೆಲೆಯಲ್ಲಿ ದ. 5ರ ಬಳಿಕ ರಜೆ ದಿನಗಳು ಕಳೆದು ದ್ವಿತೀಯ ಹಂತದ ಮತದಾನ, ಮತ ಎಣಿಕೆ ಕಳೆದು ಮಾತ್ರವೇ ಪರೀಕ್ಷೆ ನಡೆಸಬಹುದಾಗಿದೆ. 20ರಿಂದ 29ರ ವರೆಗೆ ಕ್ರಿಸ್ಮಸ್ ರಜೆಗಾಗಿ ಶಾಲೆ ಮುಚ್ಚಲಾಗುವುದು.

You cannot copy contents of this page