ಕ್ಷೇತ್ರೋತ್ಸವ ಸಮಯದಲ್ಲಿ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಸರಕಾರದಿಂದ ಸುತ್ತೋಲೆ

ಕಾಸರಗೋಡು: ಕ್ಷೇತ್ರ ಉತ್ಸವಕ್ಕೆ ಸಂಬಂಧಿಸಿ ಕ್ಷೇತ್ರ ಗಳಲ್ಲೂ ಹಾಗೂ ಕ್ಷೇತ್ರ ಪರಿಸರಗಳಲ್ಲಿ ಧ್ವಜ, ತೋರಣಗಳು, ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಕೇರಳ ಹೈಕೋರ್ಟ್‌ನ ನಿರ್ದೇಶಗಳನ್ನು ಸರಿಯಾಗಿ ಪಾಲಿಸಬೇಕಾಗಿದೆ. ಕ್ಷೇತ್ರಗಳು ಹಾಗೂ ಕ್ಷೇತ್ರ ಪರಿಸರಗಳಲ್ಲಿ ರಾಜಕೀಯ ಸಂಘಟನೆಗಳ, ಸಂಸ್ಥೆಗಳ, ವ್ಯಕ್ತಿಗಳ ಚಿಹ್ನೆ ಅಥವಾ ಗುರುತುಗಳನ್ನು, ಧ್ವಜ ಅಥವಾ ತೋರಣಗಳನ್ನು ಪ್ರದರ್ಶಿಸ ಬಾರದು. ಕೋಮು ಸ್ಪರ್ಧೆ ಬೆಳೆಸುವ ಚಿತ್ರಗಳನ್ನು ಕ್ಷೇತ್ರ ಪರಿಸರಗಳಲ್ಲಿ ಪ್ರದರ್ಶಿಸಬಾರದು, ಉತ್ಸವ ಕಾಲದಲ್ಲಿ ಈ ಬಗ್ಗೆ ಪ್ರತ್ಯೇಕ ಗಮನ ಹರಿಸಲು ಸರಕಾರ ಸರ್ಕ್ಯುಲರ್‌ನಲ್ಲಿ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಕಾರ್ಯಕ್ರಮ ಗಳಿಗೆ ಬಾಡಿಗೆಗೆ ನೀಡುವ ಕ್ಷೇತ್ರ ಮಾಲಕತ್ವದ ಕಟ್ಟಡಗಳು,  ಭೂಮಿ ಯಲ್ಲಿ ಧ್ವಜ, ತೋರಣಗಳನ್ನು ಪ್ರದರ್ಶಿಸುವುದಕ್ಕೆ ದೇವಸ್ವಂ ಕಮಿಷನರ್, ಎಡ್ಮಿನಿಸ್ಟ್ರೇಟರ್‌ರ ಪ್ರತ್ಯೇಕ ಅನುಮತಿ ಪಡೆದು ಕೊಳ್ಳಬೇಕಾಗಿದೆ. ಮಾನ ದಂಡಗಳನ್ನು45 ದಿನದೊಳಗೆ ಕ್ಷೇತ್ರ ಪರಿಸರಗಳಲ್ಲಿ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು, ಎಲ್ಲಾ ದೇವಸ್ವಂ ಬೋರ್ಡ್‌ನ ಅಧೀನದಲ್ಲಿರುವ ಕ್ಷೇತ್ರಗಳಿಗೂ, ಸರಕಾರ ಆರ್ಥಿಕ ಸಹಾಯ ನೀಡುವ ಕ್ಷೇತ್ರಗಳಿಗೂ ಈ ಮಾರ್ಗ ನಿರ್ದೇಶಗಳು ಅನ್ವಯವಾಗಿದೆ ಎಂದು ತಿಳಿಸಲಾಗಿದೆ.

You cannot copy contents of this page