ಆರಿಕ್ಕಾಡಿ ಬಳಿ ಯುವಕರ ಮಧ್ಯೆ ಘರ್ಷಣೆ: ಎರಡು ಪ್ರಕರಣಗಳು ದಾಖಲು

ಕುಂಬಳೆ: ಆರಿಕ್ಕಾಡಿ ಕುಂಡಾಪು ಎಂಬಲ್ಲಿ ಈತಿಂಗಳ 21ರಂದು ಸಂಜೆ ಕಾರು ಮತ್ತು ಬೈಕ್ ಸವಾರರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಬೈಕ್ ಸವಾರ ಆರಿಕ್ಕಾಡಿ ಕೋಟೆ ಹಿತ್ತಿಲು ನಿವಾಸಿ ಪ್ರದೀಪ್ ಕುಮಾರ್ (42) ನೀಡಿದ ದೂರಿನಂತೆ ಕಾರು ಚಾಲಕ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.  ಈತಿಂಗಳ ೨೧ರಂದು ಸಂಜೆ ತಾನು ಆರಿಕ್ಕಾಡಿ ಕುಂಡಾಪು ಎಂಬಲ್ಲಿ ಸ್ನೇಹಿತನ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ  ಓವರ್‌ಟೇಕ್ ಮಾಡಿ ಕಾರೊಂದು ಎದುರುಗಡೆಯಿಂದ ಬರುತ್ತಿರುವು ದನ್ನು ಕಂಡು ಅದನ್ನು ನಿಲ್ಲಿಸುವಂತೆ ಹೇಳಿದಾಗ ಕಾರಿನಲ್ಲಿದ್ದ ಇಬ್ಬರು ತನಗೆ ಹಾಗೂ ಸ್ನೇಹಿತನಿಗೆ ಹಲ್ಲೆಗೈದಿರುವುದಾಗಿ ಆರೋಪಿಸಿ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕಾರಿನಲ್ಲಿದ್ದ ಇಬ್ಬರ ವಿರುದ್ಧ ಕೇಸ ದಾಖಲಿಸಲಾಗಿದೆ.

ಇದೇ ರೀತಿ ಕಾರಿನಲ್ಲಿದ್ದ ತಾಳೆಕೊಡ್ಯಮೆಯ  ಮೂಸಾ ಬಿ.ಪಿ (38) ನೀಡಿದ ದೂರಿನಂತೆ ಪ್ರದೀಪ್ ಕುಮಾರ್ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಪ್ರದೀಪ್ ಕುಮಾರ್ ಮತ್ತು ಆತನ ಸ್ನೇಹಿತ ಬೈಕ್‌ನಲ್ಲಿ ಜೋರಾಗಿ ಮಾತನಾಡಿಕೊಂಡು ಹೋಗುತ್ತಿರು ವುದನ್ನು ಕಂಡು ತಾನು ಕಾರು ನಿಲ್ಲಿಸಿ  ಹೊರಕ್ಕಿಳಿದ ವೇಳೆ ಬೈಕ್‌ನಲ್ಲಿದ್ದ ಇಬ್ಬರು ತನಗೆ ಹಾಗೂ ತನ್ನ ಸಹೋ ದರಿಯ ಪುತ್ರ ಯಾಸಿರ್ (30)ಗೆ ಹಲ್ಲೆ ನಡೆಸಿದರೆಂದೂ, ಅದನ್ನು ತಡೆಯಲು ಬಂದ ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೂಸಾ ಆರೋಪಿಸಿದ್ದಾರೆ.

RELATED NEWS

You cannot copy contents of this page