ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಎರಡು ತಂಡಗಳ ಮಧ್ಯೆ ನಿನ್ನೆ ರಾತ್ರಿ ಪರಸ್ಪರ ಹೊಡೆದಾಟ ನಡೆದಿದೆ. ಕೀಯೂರಿನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ತಲುಪಿದ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ದೀರ್ಘ ಹೊತ್ತು ಭಯದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಡ್ಯೂಟಿ ಡಾಕ್ಟರ್‌ರ ದೂರಿನಂತೆ ನಗರಠಾಣೆ ಪೊಲೀಸರು 8 ಮಂದಿ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಘಟನೆ ನಡೆದಿದೆ. ಡಾ| ಮುಹಮ್ಮದ್ ನಿಸಾರ್‌ರ ದೂರಿನಂತೆ ಮಾಂಙಾಡ್ ಬಾರಾದ ಪಿ.ಟಿ. ಶಬೀರ್ ಅಲಿ (28), ಚೆಮ್ನಾಡ್ ಕೊಂಬನಡ್ಕದ ಪಿ. ಜಗದೀಶ್ ಕುಮಾರ್ (34), ಕೀಯೂರು ಪಡಿಂಞಾರ್‌ನ ಅಹಮ್ಮದ್ ಶಾನವಾಸ್ (25), ಕೊಂಬನಡ್ಕದ ಸಿ.ಕೆ. ಅಜೇಶ್ (27), ಕೀಯೂರು ಕಡಪ್ಪುರದ ಅಬ್ದುಲ್ ಸಫೀರ್ (31), ಮುಹಮ್ಮದ್ ಅಪ್ನಾನ್ (19), ಸಯ್ಯಿದ್ ಅಫ್ರೀದ್ (27),ಡಿ.ಎಂ. ಕುಂಞಹಮ್ಮದ್ (36) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಚಿಕಿತ್ಸೆಗಾಗಿ ತಲುಪಿದವರು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಹಾಗೂ ಹೊರಗೆ ಪರಸ್ಪರ ಹೊಡೆದಾಡಿಕೊಂ ಡಿದ್ದಾರೆ. ವೈದ್ಯರ, ದಾದಿಯರ ಹಾಗೂ ಇತರ ನೌಕರರ ಕರ್ತವ್ಯಕ್ಕೆ ಅಡ್ಡಿಯಾ ಗುವ ರೀತಿಯಲ್ಲಿ ತಂಡಗಳು ಹೊಡೆ ದಾಡಿಕೊಂಡಿರುವುದಾಗಿ ದೂರಲಾಗಿದೆ. ಇದೇ ವೇಳೆ ಕೀಯೂರು ಪಡಂಞಾರ್ ನಲ್ಲಿ ನಿನ್ನೆ ರಾತ್ರಿ ನಡೆದ ಘರ್ಷಣೆಗೆ ಸಂಬಂಧಿಸಿ 14 ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕುಂಞಹ ದ್, ಶಫೀರ್, ಶಾನವಾಸ್, ಶಬೀರ್‌ಹಾಗೂ ಕಂಡರೆ ಪತ್ತೆಹಚ್ಚಬಹು ದಾದ ಇತರ 10 ಮಂದಿ ವಿರುದ್ಧ ಮೇಲ್ಪರಂಬ ಎಸ್‌ಐ ವಿ.ಕೆ.ಅನೀಶ್‌ರ ದೂರಿನಂತೆ ಕೇಸು ದಾಖಲಿಸಲಾಗಿದೆ.
ಇದೇ ವೇಳೆ ಆಸ್ಪತ್ರೆಯಲ್ಲಿ ತಂಡ ಗಳು ಪರಸ್ಪರ ಹೊಡೆದಾಡಿ ಕೊಳ್ಳುತ್ತಿರು ವುದು ಇತ್ತೀಚೆಗಿನಿಂದ ಪದೇ ಪದೇ ನಡೆಯುತ್ತಿದೆ. ಇದು ವೈದ್ಯರು ಹಾಗೂ ಇತರ ನೌಕರರ ಕರ್ತವ್ಯಕ್ಕೆ ಅಡ್ಡಿಯಾಗು ವುದರ ಜೊತೆಗೆ ಆತಂಕಕ್ಕೂ ಕಾರಣ ವಾಗುತ್ತಿದೆ.
ಇತ್ತೀಚೆಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಲುಪಿದ ಯುವಕನ ಮೇಲೆ ತಂಡ ಹಲ್ಲೆಗೈದಿತ್ತು. ಈ ಘಟನೆಯ ಬಳಿಕ ಆಸ್ಪತ್ರೆಯಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆದರೆ ತಂಡಗಳ ಮಧ್ಯೆ ಹೊಡೆದಾಟ ಮತ್ತೆ ಮತ್ತೆ ನಡೆಯುತ್ತಿರುವುದು ಕಂಡು ಬರುತ್ತಿದೆ.







