ಕಾಸರಗೋಡು: ಕೇರಳ ಕೋ-ಆಪರೇಟಿವ್ ಎಂಪ್ಲೋಯೀಸ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮ್ಮೇಳನ ನಾಳೆ ಹಾಗೂ ಆದಿತ್ಯವಾರ ಮುನ್ನಾಡ್‌ನಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸಿಐಟಿಯು ರಾಜ್ಯ ಸಮಿತಿ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿ ಸುವರು. ಇದರಂಗವಾಗಿ ನಡೆಯುವ ಸಹಕಾರಿ ಸಮ್ಮೇಳನವನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ಸೇವೆಯಿಂದ ನಿವೃತ್ತರಾದವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಸಹಕಾರಿ ಠೇವಣಿ ಗ್ಯಾರಂಟಿ ಫಂಡ್ ಬೋರ್ಡ್ ಉಪಾಧ್ಯಕ್ಷ ಕೆ.ಪಿ. ಸತೀಶ್ಚಂದ್ರನ್ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸುವರು. ಸಹಕಾರಿ ವಲಯವನ್ನು ನಾಶಪಡಿಸಲಿರುವ ಕೇಂದ್ರ ಸರಕಾರದ ನೀತಿ ವಿರುದ್ಧ ಮುಷ್ಕರಕ್ಕೆ ಸಮ್ಮೇಳನ ರೂಪು ನೀಡಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
