ಕುಸಿದುಬಿದ್ದು ನಿಧನ

ಕುಂಬಳೆ: ವಾಣಿಯ ಗಾಣಿಗ ಸಭಾ ಕುಂಬಳೆ ಘಟಕದ ಗೌರವಾಧ್ಯಕ್ಷರಾಗಿದ್ದ ಆರಿಕ್ಕಾಡಿ ನಿವಾಸಿ ತೇರಪ್ಪ ಪಾಟಾಳಿ (69) ನಿಧನ ಹೊಂದಿದರು. ನಿನ್ನೆ ರಾತ್ರಿ ವೇಳೆ ಕುಸಿದುಬಿದ್ದಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ನಿಧನ ಸಂಭವಿಸಿದೆ. ಈ ಹಿಂದೆ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದರು.

ಇವರ ತಂದೆ  ಮಾನ ಕಾರ್ನವರ್ ಈ ಹಿಂದ ನಿಧನಹೊಂದಿದ್ದಾರೆ. ಮೃತರು ಪತ್ನಿ ವಿಶಾಲಾಕ್ಷಿ, ಮಕ್ಕಳಾದ ಶ್ರೀಕಾಂತ್,  ಶ್ರೀಕಲಾ, ಅಳಿಯ ನವೀನ್, ಸೊಸೆ ಸುಷ್ಮಾ, ಸಹೋದರಿಯರಾದ ಬೇಬಿ, ಸೀತಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page