ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚುಗಡೆಗೊಳಿಸಿದ ಮನೆ ಹಾಗೂ ಅಂಗಡಿಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳ ಕುರಿತು ಪರಿಶೀಲನೆ ನಡೆಸಲು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ತಲುಪಿದ್ದಾರೆ. ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ತೃಶೂರ್ ವಲಯ ಕಚೇರಿಯ ಪ್ರಾಚ್ಯ ವಸ್ತು ತಜ್ಞರಾದ ಮೂರು ಮಂದಿ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ಶಟರ್ ಮುಚ್ಚಿದ ಅಂಗಡಿಯಿಂದ ಈ ಹಿಂದೆ ಪತ್ತೆಹಚ್ಚಿ ಬೇಕಲ ಪೊಲೀಸ್ ಠಾಣೆಯಲ್ಲಿ ಭದ್ರವಾಗಿರಿಸಿದ ಖಡ್ಗಗಳು ಹಾಗೂ ಬಂದೂಕುಗಳನ್ನು ಮೊದಲು ಪರಿಶೀಲನೆ ನಡೆಸಲಾಯಿತು. ಅನಂತರ ಮನೆ ಹಾಗೂ ಅಂಗಡಿಯೊಳಗೆ ಸಂಗ್ರಹಿಸಿಟ್ಟವಸ್ತುಗಳ ನ್ನು ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಅಂಗಡಿ ತೆರೆದು ಪರಿಶೀಲಿಸುವ ವೇಳೆ ಹಾವುಗಳು ಪತ್ತೆಯಾದಲ್ಲಿ ಅವುಗಳನ್ನು ಸೆರೆಹಿಡಿಯಲು ಹಾವು ಹಿಡಿತಗಾರರನ್ನು ಏರ್ಪಡಿಸಲಾಗಿದೆ.
