ಕಾಸರಗೋಡು: ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ತಡೆಗಟ್ಟಬೇಕು, ಮೂಢನಂಬಿಕೆ ಮರೆಯಲ್ಲಿ ಮಹಿಳೆಯರ ವಿರುದ್ಧ ಚಟುವಟಿಕೆಯನ್ನು ತಡೆಯಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಜೋಯಿಂಟ್ ಕೌನ್ಸಿಲ್ ಜಿಲ್ಲಾ ಮಹಿಳಾ ಸಮಿತಿ ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಿತು. ಮಾರ್ಚ್‌ಗೆ ಜೋಯಿಂಟ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ನರೇಶ್ ಕುಮಾರ್ ಕುನ್ನಿಯೂರ್ ಧ್ವಜ ಹಾರಿಸಿ ಚಾಲನೆ ನೀಡಿದರು. ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಭಾರ್ಗವಿ ಉದ್ಘಾಟಿಸಿದರು. ಮಹಿಳಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ. ಪ್ರೀತ, ರಾಜ್ಯ ಸಮಿತಿ ಸದಸ್ಯೆ ಯಮುನಾ ರಾಘವನ್, ಜಿಲ್ಲಾ ಕಾರ್ಯದರ್ಶಿ ಬಾನಂ ದಿವಾಕರನ್, ಸುನಿತಾ ಕರಿಚ್ಚೇರಿ, ಜಿಲ್ಲಾ ಜತೆ ಕಾರ್ಯದರ್ಶಿ ರೆಜಿ ಕೆ.ಆರ್, ಪಿ.ವಿ. ನಿಶಾ, ಪುಷ್ಪಾ ಪಿ.ವಿ, ಎಂ.ವಿ. ಭವಾನಿ, ರೀನಾ ಜೋಸೆಫ್, ವಲಯ ಮಹಿಳಾ ಸಮಿತಿ ಅಧ್ಯಕ್ಷೆ ಆಯಿಷಾ ನೇತೃತ್ವ ನೀಡಿದರು.







