19 ಕೆ.ಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರ 202 ರೂ. ಇಳಿಕೆ

ನವದೆಹಲಿ: ದೇಶದ ಜನತೆಗೆ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದ್ದು 19 ಕೆ.ಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ.  ಈ ಹೊಸ ಪರಿಷ್ಕರಣೆಯಲ್ಲಿ 19 ಕೆ.ಜಿ ತೂಕದ ವಾಣಿಜ್ಯ ಬೆಲೆಯನ್ನು 202 ರೂ.  ಇಳಿಸಲಾಗಿದೆ. ಆದರೆ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಉಂಟಾಗಿದೆ. ವಾಣಿಜ್ಯ ಸಿಲಿಂಡರ್ ದರ ಇಳಿಕೆಯಿಂದ 19 ಕೆಜಿ ಸಿಲಿಂಡರ್ ಬೆಲೆ ಈಗ 2872.50 ಪೈಸೆಯಾಗಿದೆ. ಇತರ ರಾಜ್ಯಗಳಲ್ಲಿ   ತೆರಿಗೆ ಮತ್ತು ಸಾಗಾಟ ವೆಚ್ಚಕ್ಕೆ ಹೊಂದಿಕೊಂಡು ಬೆಲೆಯಲ್ಲಿ ವ್ಯತ್ಯಾಸ ಉಂಟಾಗಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಕಳೆದ ತಿಂಗಳಲ್ಲೂ ವಾಣಿಜ್ಯ ಸಿಲಿಂ ಡರ್ ಬೆಲೆಯಲ್ಲಿ  174 ರೂ.ಗಳಷ್ಟು ಇಳಿಸಲಾಗಿತ್ತು. ಅದರ ಬೆನ್ನಲ್ಲೇ ಈಗ 202 ರೂ. ಇಳಿಸಲಾಗಿದೆ.

You cannot copy contents of this page