ತಂದೆಯ ಆರೈಕೆಗಾಗಿ ಆಸ್ಪತ್ರೆಯಲ್ಲಿದ್ದ ಪುತ್ರ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಪಯ್ಯನ್ನೂರು: ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ 7ನೇ ಮಹಡಿಯಿಂದ ಹಾರಿ ರೋಗಿಯ ಜೊತೆಗೆ ನಿಲ್ಲಲು ತಲುಪಿದ್ದ ವ್ಯಕ್ತಿ ಮೃತಪಟ್ಟರು. ಶ್ರೀಕಂಠಪುರ ಕಾನಿಲೇರಿ ಆಲಕುನ್ನು ಥೋಮಸ್- ತ್ರೇಸಿಯಮ್ಮ ದಂಪತಿ ಪುತ್ರ ಟೋಮ್ ಥೋಮ್ಸನ್ (40) ಮೃತಪಟ್ಟವರು. ಇಂದು ಮುಂಜಾನೆ 1 ಗಂಟೆ ವೇಳೆ ಘಟನೆ ನಡೆದಿದೆ.  ಟೋಮ್ ಥೋಮ್ಸನ್‌ರ ತಂದೆ ಥೋಮಸ್ ಹರ್ನಿಯ ಆಪರೇಶನ್ ಮುಗಿಸಿ ವಾರ್ಡ್‌ನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ತಂದೆಯನ್ನು ಶುಶ್ರೂಷಿಸಲು ನಿಂತಿದ್ದ ಟೋಮ್ ಥೋಮ್ಸನ್ ಇಂದು ಮುಂಜಾನೆ 1 ಗಂಟೆ ವೇಳೆ ಗಲಭೆ ಸೃಷ್ಟಿಸಿರುವುದಾಗಿ ಹೇಳಲಾಗುತ್ತಿದೆ. ಭದ್ರತಾ ನೌಕರರು, ಆಸ್ಪತ್ರೆಯಲ್ಲಿ ಇದ್ದವರು ಸ್ಥಳಕ್ಕೆ ತಲುಪಿದಾಗ ಕೆಳಗೆ ಹಾರುವುದಾಗಿ ಬೆದರಿಕೆ ಒಡ್ಡಿದ ಥೋಮ್ಸನ್ ೭ನೇ ಮಹಡಿಯ ಮೇಲೆ ಹತ್ತಿ ನಿಂತರು. ಆಸ್ಪತ್ರೆ ಅಧಿಕಾರಿಗಳು ಅಗ್ನಿಶಾಮಕದಳಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಅವರು ತಲುಪಿ ಬಲೆ ಬೀಸಿದರು. ಆದರೆ ಬಲೆಯನ್ನು ತಪ್ಪಿಸಿ ಇವರು ಕೆಳಗೆ ಹಾರಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಸಾವು ಸಂಭವಿಸಿದೆ. ಮೃತರು ಪತ್ನಿ ಜೋಶಿ ಮೋಳ್, ಮಕ್ಕಳಾದ ಆಶಿಕ್, ಅಯೋನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page