ಉಮೇಶ್ ಕಾಮತ್ ಕಂಪೆನಿ ಮಾಲಕ ನಿಧನ

ಕಾಸರಗೋಡು: ಕಾಞಂಗಾಡ್‌ನ ಹಿರಿಯ ವ್ಯಾಪಾರಿ ಕೆ. ಉಮೇಶ್ ಕಾಮತ್ ಕಂಪೆನಿಯ ಮಾಲಕ ಮೇಲಾಂಗೋಟ್ ಎಸ್‌ಎಸ್ ಕಲಾ ಮಂದಿರ ಸಮೀಪ ನಿವಾಸಿ ಕೆ. ಉಮೇಶ್ ಕಾಮತ್ (78) ನಿಧನ ಹೊಂದಿದರು. ಕಾಞಂಗಾಡ್‌ನ ಮೊದಲ ಮಿಠಾಯಿ ನಿರ್ಮಾಣ ಕಂಪೆನಿಯಾದ ಬ್ರೂಕ್ ಕನ್ಫೆಕ್ಷನರಿ ಮಾಲಕನಾಗಿದ್ದರು. ಕಾಞಂಗಾಡ್ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ, ಹೊಸದುರ್ಗ ಲಕ್ಷ್ಮೀವೆಂಕಟೇ ಶ್ವರ ಕ್ಷೇತ್ರ ಮೆನೇಜಿಂಗ್ ಟ್ರಸ್ಟಿ, ಜಿಎಸ್‌ಬಿ ಗ್ರಾಮಸಭಾ ಅಧ್ಯಕ್ಷ, ಕಾಞಂಗಾಡ್ ಚಿನ್ಮಯ ಮಿಷನ್ ಅಧ್ಯಕ್ಷ ಸಹಿತ ವಿವಿಧ ರಂಗದಲ್ಲಿ ಕಾರ್ಯಾ ಚರಿಸಿದ್ದರು. ಇಂದು ಬೆಳಿಗ್ಗೆ ಕಾಞಂ ಗಾಡ್ ವ್ಯಾಪಾರ ಭವನದಲ್ಲಿ ಅಂತಿಮ ದರ್ಶನಕ್ಕಿರಿಸಲಾಯಿತು. ಮಧ್ಯಾಹ್ನದ ವರೆಗೆ ವ್ಯಾಪಾರಿಗಳು ಅಂಗಡಿಮುಚ್ಚಿ ಶೋಕಾಚರಣೆ ನಡೆಸಿದರು.

ಮೃತರು ಪತ್ನಿ ವೀಣಾ ಕಾಮತ್, ಮಕ್ಕಳಾದ ರಾಜೇಶ್ ಕಾಮತ್, ಡಾ| ಪ್ರಕಾಶ್ ಕಾಮತ್, ನಯನ ಪ್ರಭು, ಸೊಸೆಯಂದಿರಾದ ರಾಧಿಕಾ ಕಾಮತ್, ಡಾ| ರೇಷ್ಮಾ ಕಾಮತ್, ಅಳಿಯ ಹರೀಶ್ ಪ್ರಭು, ಸಹೋದರ ಸಹೋದರಿ ಯರಾದ ಉಷಾ ಡಿ. ಭಕ್ತ, ಡಾ| ಕೆ.ಜಿ. ಕಾಮತ್, ರತ್ನಾಕರನ್ ಕಾಮತ್, ದಯಾನಂದ ಕಾಮತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page