ಕುಂಬಳೆ: ದೂರುದಾರನನ್ನು ಠಾಣೆಗೆ ಕರೆಸಿ ಪ್ರತಿ ದೂರುದಾರನ ಮುಂದೆ ಇನ್ಸ್‌ಪೆಕ್ಟರ್ ಆಕ್ಷೇಪಿಸಿ ಬೆದರಿಸಿರುವು ದಾಗಿ ಖ್ಯಾತ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತನಾದ ಬಿ. ವಿಕ್ರಮ್ ಪೈ ಮುಖ್ಯಮಂತ್ರಿ, ಡಿಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಿಲೆನ್ಸ್ ಡಿವೈಎಸ್‌ಪಿ, ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಎಂಬಿ ವರಿಗೆ ದೂರು ನೀಡಿದ್ದಾರೆ. ರಾಜ್ಯದ ಕಾನೂನು ವ್ಯವಸ್ಥೆಯನ್ನು ಸಾಮಾನ್ಯ ಜನರನ್ನು ಬೆದರಿಸುವುದಕ್ಕಿರುವ ಮಾರ್ಗವನ್ನಾಗಿ ಕಂಡುಕೊಳ್ಳುವ ಕಾನೂನುಪಾಲಕರನ್ನು ಮಾದರಿಯಾಗಿ ಶಿಕ್ಷಿಸಬೇಕೆಂದು ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ. ಕುಂಬಳೆ ರಘುನಾಥ ಕೃಪಾದ ಬಿ. ವಿಕ್ರಮ್ ಪೈ ಹಾಗೂ ಇತರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕುಂಬಳೆ ನಾಯ್ಕಾಪುವಿನಲ್ಲಿ 2005ರಲ್ಲಿ ತಾನು ಖರೀದಿಸಿದ 1 ಎಕ್ರೆ 3 ಸೆಂಟ್ಸ್ ಸ್ಥಳವನ್ನು ಅದರ ಸಮೀಪದಲ್ಲೇ ಇರುವ ಸ್ಥಳದ ಮಾಲಕ ಖರೀದಿಸಲು ಆಗ್ರಹಿಸಿ ನನ್ನಲ್ಲಿ ಕೇಳಿದ್ದರು. ಆದರೆ ಈಗ ಅದನ್ನು ಮಾರಾಟ ಮಾಡುವುದಿಲ್ಲವೆಂದು ಹೇಳಿದ ಹಿನ್ನೆಲೆಯಲ್ಲಿ ತನ್ನ ಹಿರಿಯರು ಈ ಸ್ಥಳವನ್ನು ಕೈವಶವಿರಿಸಿಕೊಂಡಿದ್ದು, ಆ ಬಳಿಕ ತಾನು ತೆರಿಗೆ ಪಾವತಿಸುತ್ತಿರು ವುದಾಗಿಯೂ ತಿಳಿಸಿ ಇಬ್ಬರು ವ್ಯಕ್ತಿಗಳು ಆ ಸ್ಥಳಕ್ಕೆ ತೆರಳುವ ದಾರಿಯನ್ನು ಮುಚ್ಚಿ ಹೊಂಡ ತೋಡಿ ತನ್ನ ಸೊತ್ತನ್ನು ವಶಪಡಿಸಲು ಯತ್ನಿಸಿರುವುದಾಗಿಯೂ ದೂರಿನಲ್ಲಿ ವಿಕ್ರಮ್ ಪೈ ತಿಳಿಸಿದ್ದಾರೆ. ಇದರ ವಿರುದ್ಧ ಕುಂಬಳೆ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದು, ಇನ್ಸ್‌ಪೆಕ್ಟರ್ ತನ್ನನ್ನು ಹಾಗೂ ಪ್ರತಿದೂರುದಾರನನ್ನು ಠಾಣೆಗೆ ಕರೆದು ದಾರಿಯನ್ನು ಹಿಂದಿನ ರೀತಿಯಲ್ಲೇ ತೆರೆದುಕೊಡಬೇಕೆಂದು ಪ್ರತಿದೂರುದಾರನಿಗೆ ನಿರ್ದೇಶಿಸಿದ್ದರು. ಅಲ್ಲದೆ ಎರಡೂ ದೂರುದಾರರಿಂದಲೂ ಠಾಣೆಯಲ್ಲಿ ದಾಖಲೆಗಳಲ್ಲಿ ಸಹಿ ಹಾಕಿಸಿದ್ದರು. ಆದರೆ ಅದರ ಬಳಿಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೆ. ಆದರೂ ಯಾವುದೇ ಕ್ರಮ ಉಂಟಾಗದ ಹಿನ್ನೆಲೆಯಲ್ಲಿ ಮುಚ್ಚಿದ ದಾರಿಯನ್ನು, ತೋಡಿದ ಹೊಂಡವನ್ನು ಮುಚ್ಚಿ ಹಿಂದಿನಂತೆ ಮಾಡಿರುವುದಾಗಿಯೂ, ಇದರ ವಿರುದ್ಧ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು, ಸಿಐ ಮತ್ತೆ ನಮ್ಮಿಬ್ಬರನ್ನು ಕರೆಸಿ ದಾರಿ ಮುಚ್ಚುಗಡೆಗೊಳಿಸಿದ ವ್ಯಕ್ತಿಯ ಮುಂಭಾಗದಲ್ಲಿ ತನ್ನನ್ನು ಅಸಭ್ಯವಾಗಿ ಬೈದು ಜೈಲಿಗಟ್ಟುವುದಾಗಿ ತಾಕೀತು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು ಮುನ್ಸಿಫ್ ನ್ಯಾಯಾಲಯದಲ್ಲಿ ಈ ಬಗ್ಗೆ ಕೇಸು ಜ್ಯಾರಿಯಲ್ಲಿರುವಾಗ ಅದರ ವಿರುದ್ಧ ಪೊಲೀಸರು ತನ್ನನ್ನು ಬೆದರಿಸಿರು ವುದಾಗಿಯೂ ಮುಖ್ಯಮಂತ್ರಿ ಹಾಗೂ ಇತರರಿಗೆ ನೀಡಿದ ದೂರಿನಲ್ಲಿ ವಿಕ್ರಮ್ ಪೈ ತಿಳಿಸಿದ್ದಾರೆ.