ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಬಗ್ಗೆ ದೂರು: ವೈದ್ಯರು ಸೇರಿ 5 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ವೈದ್ಯಕೀಯ ಸಾಮಗ್ರಿ ಗಳನ್ನು ಖರೀದಿಸಿದ ವತಿಯಿಂದ ನೀಡಬೇಕಾಗಿದ್ದ 39980.50 ರೂ. ನೀಡದೆ ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನ್ಯಾಯಾಲಯ ನಿರ್ದೇಶ ಪ್ರಕಾರ ನಾಲ್ವರು ವೈದ್ಯರು ಸೇರಿ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ತಲಾಪ್ ಚಿನ್ಮಯ ಬಾಲಭವನದ ಎದುರುಭಾಗದ ರಿನ್ ಮಾರ್ಕೆಟಿಂಗ್ ಆಂಡ್ ಸರ್ವೀಸ್ ಎಂಬ ಸಂಸ್ಥೆಯ ಮಾಲಕ  ವೆಟ್ಟಿಯಿನ್ ಗೋಕುಲ್‌ರಾಜ್ ಎಂಬವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಅದರಂತೆ ನ್ಯಾಯಾಲಯದ ನಿರ್ದೇಶ ಪ್ರಕಾರ ಕಾಸರಗೋಡು ಪಿಲಿಕುಂಜೆ ನಿವಾಸಿಗಳಾದ ಡಾ. ಮೊಹಮ್ಮದ್ ಝಹೀರ್, ಡಾ| ಅಲಿ ಕೆ.ಪಿ, ಡಾ| ತಸ್‌ನೀಶಾ ನರ್ಗೀಸ್,ಡಾ| ಆಯಿಷತ್ ಶಂಶೀರಾ ಮತ್ತು ಕಲ್ಲಿಕೋಟೆ ಎಸ್‌ಟಿ ವಿನ್ಸೆಂಟ್ ಕಾಲನಿಯ ಕಂಡಂಪತ್ತ್ ಪುದಿಯಡತ್ತ್  ಜಬ್ಸೀರ್ ಎಂಬವರ ವಿರುದ್ಧ ಕುಂಬಳೆ ಪೊಲೀಸರು  ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಸಂಸ್ಥೆಯಿಂದ 2022 ಫೆಬ್ರವರಿ 22ರಿಂದ ಆರಂಭಗೊಂಡು 2025ಜೂನ್ 3ರ  ನಡುವಿನ ಅವಧಿಯಲ್ಲಿ ಖರೀದಿಸಲಾದ ವೈದ್ಯಕೀಯ ಉಪಕರರಣಗಳ ಹಣವನ್ನು ನೀಡದೆ ಈ ಐದು ಮಂದಿ ವಂಚಿಸಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಗೋಕುಲ್‌ರಾಜ್ ಆರೋಪಿಸಿದ್ದಾರೆ.

RELATED NEWS

You cannot copy contents of this page