ಉದ್ಯೋಗ ವಿಸಾಕ್ಕೆ 9,00,000 ರೂ. ಪಡೆದು ವಂಚನೆಗೈದ ಬಗ್ಗೆ ದೂರು: ಪ್ರಕರಣ ದಾಖಲು

ಕುಂಬಳೆ: ಮಾಲ್ಡಾದಲ್ಲಿ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ 9,00,000 ರೂ. ಪಡೆದು ಬಳಿಕ ವಿಸಾವನ್ನಾಗಲೀ, ನೀಡಿದ ಹಣವನ್ನಾ ಗಲೀ ಹಿಂತಿರುಗಿಸದೆ ವಂಚನೆಗೈದಿರುವು ದಾಗಿ ಆರೋಪಿಸಿ ನೀಡಲಾದ ದೂರಿನಂತೆ ತೃಶೂರು ಸಿಟಿ ಪರಕ್ಕಾಡಿ ವೇಲತ್ತೂರು ಬಾವಿಲಿಲ್ ನಿವಾಸಿ ಅಲ್‌ಬಿನ್ ಥೋಮಸ್ (47)ನ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಕುಂಬಳೆ ಕೃಷ್ಣನಗರದ ಪವನ್ ಡಾನ್ಸಿಲ್ ಡಿ’ಸೋಜಾ (31) ಎಂಬವರು  ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲ್ಡಾದ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ಆರೋಪಿ 2021 ಅಕ್ಟೋಬರ್ 1ರಿಂದ 2026 ಜನವರಿ 12ರ ಅವಧಿಯೊಳಗಾಗಿ   ಆತನ ಬ್ಯಾಂಕ್ ಖಾತೆಯ ಮೂಲಕ ಹಾಗೂ ಆತನ ಇಬ್ಬರು ಸ್ನೇಹಿತರ ಬ್ಯಾಂಕ್ ಖಾತೆಯ ಮೂಲಕ ತನ್ನ ಬ್ಯಾಂಕ್ ಖಾತೆಗಳಿಂದ ಒಟ್ಟು 9,00,000 ರೂ. ಪಡೆದು ವಂಚನೆಗೈದಿರುವುದಾಗಿ  ಪೊಲೀಸರಿಗೆ ನೀಡಿದ ದೂರಿನಲ್ಲಿ ಪವನ್ ಡಾನ್ಸಿಲ್ ಡಿ’ಸೋಜಾ ತಿಳಿಸಿದ್ದಾರೆ.

RELATED NEWS

You cannot copy contents of this page