ಕಾಸರಗೋಡು: ಕರ್ತವ್ಯದ ಮಧ್ಯೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಅದರ ನಿರ್ವಾಹಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಪಾಣತ್ತೂರು ಚಿರಂಕಡವು ನಿವಾಸಿ ಸುನೀಶ್ ಅಬ್ರಹಾಂ (50) ಸಾವನ್ನಪ್ಪಿದ ವ್ಯಕ್ತಿ. ಇವರು ಪಾಣತ್ತೂರಿನ ಹೊಸದುರ್ಗ ರೂಟ್ನ ಕೆಎಸ್ಆರ್ಟಿಸಿ ಬಸ್ನ ನಿರ್ವಾಹಕನಾಗಿದ್ದಾರೆ. ಬಸ್ ಇಂದು ಬೆಳಿಗ್ಗೆ ಪಾಣತ್ತೂರಿನಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಕೋಳಿಚ್ಚಾಲ್ ತಲುಪಿದಾಗ ಸುನೀಶ್ರಿಗೆ ಎದೆನೋವು ಅನುಭವಗೊಂಡಿದೆ. ಅದನ್ನು ಕಂಡ ಚಾಲಕ ಬಸ್ನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಸುತ್ತಿದ್ದ ಸಮಾಜಸೇವಕ ಶಿಬು ಪಾಣತ್ತೂರು ಮತ್ತಿತರರು ಸೇರಿ ಅವರನ್ನು ತಕ್ಷಣ ಮಾಲಕ್ಕಲ್ನ ಖಾಸಗೀ ಆಸ್ಪತ್ರೆಗೆ ಒಯ್ದು ಬಳಿಕ ಅಲ್ಲಿಂದ ಮಾವುಂ ಗಾಲ್ ಸಂಜೀವಿನಿ ಆಸ್ಪತ್ರೆಗೆ ಸಾಗಿಸಿ ದರೂ, ಅದು ಫಲಕಾರಿಯಾಗದೆ ಅವರು ಅಸುನೀಗಿದರು. ಮೃತದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
