ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತಿಸಿದ ಕಂಡಕ್ಟರ್ ವಿರೋಧಿಸಿದ ವಿದ್ಯಾರ್ಥಿನಿಯನ್ನು ದಾರಿ ಮಧ್ಯೆ ಇಳಿಸಿ ಪ್ರತೀಕಾರ

ಕುಂಬಳೆ: ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಕಾಲೇಜು ವಿದ್ಯಾರ್ಥಿನಿಯನ್ನು ಸ್ಪರ್ಶಿಸಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಬಗ್ಗೆ ದೂರ ಲಾಗಿದೆ. ಕಂಡಕ್ಟರ್‌ನ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದ ವಿದ್ಯಾರ್ಥಿ ನಿಯನ್ನು ದಾರಿ ಮಧ್ಯೆ ಇಳಿಸಿ ಬಸ್ ನೌಕರರು ಪ್ರತೀಕಾರ ತೋರಿಸಿದ್ದಾರೆ.

ನಿನ್ನೆ ಬೆಳಿಗ್ಗೆ ೮.೪೫ರ ವೇಳೆ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಂ ದ್ಯೋಡಿನಿಂದ ಪರೀಕ್ಷೆಗಾಗಿ ಮಂಗಳೂರಿನ ಕಾಲೇಜಿಗೆ ತೆರಳುತ್ತಿದ್ದಳು.  ಟಿಕೆಟ್ ನೀಡಲು  ತಲುಪಿದ ಕಂಡಕ್ಟರ್ ಆಕೆಯನ್ನು ಸ್ಪರ್ಶಿಸಿದ್ದ ನೆನ್ನಲಾಗಿದೆ. ಆತನ ವರ್ತನೆಯನ್ನು ವಿದ್ಯಾರ್ಥಿನಿ ಪ್ರಶ್ನಿಸಿದ್ದು, ಈ ವೇಳೆ ಕಂಡಕ್ಟರ್ ಆಕೆಯನ್ನು ನಿಂದಿಸಿದ್ದಾನೆಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ  ‘ನೀನು ಏನು ಬೇಕಾದರೂ ಮಾಡು, ನನಗೆ ಯಾವುದೇ ಸಮಸ್ಯೆಯಿಲ್ಲ’ ಎಂದು ಕಂಡಕ್ಟರ್ ಸವಾಲೆಸೆದಿದ್ದಾನೆಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ವಿದ್ಯಾರ್ಥಿನಿ ಹಾಗೂ ಕಂಡಕ್ಟರ್‌ನ ವಾಗ್ವಾದ ತೀವ್ರಗೊಂಡಾಗ ಬಸ್ ಚಾಲಕನೂ ಅದರಲ್ಲಿ ಮಧ್ಯೆ ಪ್ರವೇಶಿಸಿದ್ದಾನೆ. ಬಳಿಕ ಬಸ್ ಪ್ರಯಾಣ ಮುಂದುವರಿಸಿದ್ದು, ಮಂಜೇಶ್ವರಕ್ಕೆ ತಲುಪಿದಾಗ ತನ್ನನ್ನು ದಾರಿ ಮಧ್ಯೆ ಬಸ್‌ನಿಂದ ಇಳಿಸಿರುವುದಾಗಿಯೂ ವಿದ್ಯಾರ್ಥಿನಿ ದೂರಿದ್ದಾಳೆ. ಇದೇ ವೇಳೆ ಇಷ್ಟೆಲ್ಲಾ ಘಟನೆ ಬಸ್‌ನಲ್ಲಿ ನಡೆದರೂ ಪ್ರಯಾಣಿಕರ‍್ಯಾರೂ  ಸಹಾಯಕ್ಕೆ ಬರಲಿಲ್ಲವೆಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಮನೆಗೆ ಮರಳಿ ತಲುಪಿದ ವಿದ್ಯಾರ್ಥಿನಿ ತಾಯಿಯೊಂದಿಗೆ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈ ಕಂಡಕ್ಟರ್‌ನ ವಿರುದ್ಧ ಈ ಹಿಂದೆಯೂ ಇದೇ ರೀತಿಯ  ದೂರುಗಳು  ಕೇಳಿಬಂದಿದೆಯೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದೇ ವೇಳೆ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಕುಂಬಳೆ ಠಾಣೆಗೆ ಹಸ್ತಾಂತರಿಸಲಾಗಿದೆ.

You cannot copy contents of this page