ಮಂಜೇಶ್ವರ: ಕಲ್ಲಿಕೋಟೆ ವಲಯ ದಲ್ಲಿ ಪಕ್ಷ ತೀರ್ಮಾನಿಸಿದ ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಅಭಿನಂದನೆ ಸಲ್ಲಿಸಲಾಯಿತು. ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್, ಕೆ.ವಿ. ಭಟ್ ಇವರು ಗೌರವ ಸ್ವೀಕರಿಸಿ ದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೃಷ್ಣದಾಸ್, ರಾಜ್ಯ ಉಪಾಧ್ಯಕ್ಷರಾದ ಎಂ.ಟಿ. ರಮೇಶ್, ಶ್ರೀಕಾಂತ್, ಶಾನ್ ಜೋರ್ಜ್, ಸಜೀವನ್, ಗೋಪಾಲಕೃಷ್ಣ, ನವ್ಯಾ ಹರಿದಾಸ್ ಉಪಸ್ಥಿತರಿದ್ದರು.
