ಹಳೆಯ ಬಟ್ಟೆಗಳ ಮಧ್ಯೆ ಲಭಿಸಿದ  ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರಿಗೆ ಅಭಿನಂದನೆ

ಮುಳ್ಳೇರಿಯ: ಹಳೆಯ ಸಾಮಗ್ರಿಗಳನ್ನು  ಸಂಗ್ರಹಿಸುವ ಮಧ್ಯೆ ಲಭಿಸಿದ ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಮಾದರಿಯಾಗಿದ್ದಾರೆ. ಕಾರಡ್ಕ ಪಂಚಾಯತ್‌ನ  ೬ನೇ ವಾರ್ಡ್ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯ ರಾದ ತಾರಾ, ಮೀನಾಕ್ಷಿ ಕಡೆಂಗೋಡು ಪ್ರಾಮಾಣಿಕತೆ ಮೆರೆದು ಮಾದರಿಯಾದವರು. ಇವರು ಮಲ್ಲಾವರ ನಿವಾಸಿ ಆನಂದ ಭಟ್‌ರ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿದ್ದರು. ಇದನ್ನು ತೆಗೆದುಕೊಂಡು ಹೋಗಿ ಸಂಗ್ರಹಣಾ ಕೇಂದ್ರದಲ್ಲಿ ಹಾಕುವ ವೇಳೆ  ಬಟ್ಟೆಗಳ ಮಧ್ಯೆ ೫೦೦೦ ರೂ. ಪತ್ತೆಯಾಗಿದೆ. ಕೂಡಲೇ ಇದನ್ನು ಮಲ್ಲಾ ವರದ ಆನಂದ ಭಟ್‌ರ ಮನೆಗೆ ತೆರಳಿ ಹಿಂತಿರುಗಿಸಿ ದ್ದಾರೆ. ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರ ಈ ಮಾದರಿ ಕೆಲಸಕ್ಕೆ ಇವರನ್ನು ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಭಿನಂದಿಸಿದ್ದಾರೆ.

You cannot copy contents of this page