ಕಾಂಗ್ರೆಸ್ ಆಕ್ರಮಣ: ವರ್ಕಾಡಿಯಲ್ಲಿ ಬಿಜೆಪಿ ಪ್ರತಿಭಟನೆ

ವರ್ಕಾಡಿ: ಬಿಜೆಪಿ ನೇತಾರರ, ಪಕ್ಷದ ಕಚೇರಿಗೆ ಆಕ್ರಮಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಜೀರ್‌ಪಳ್ಳ ಪೇಟೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಕೇರಳದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಅಧಿಕಾರ ಮದದಲ್ಲಿ ಕಾಂಗ್ರೆಸ್ ಕಮ್ಯುನಿಸ್ಟನ್ನು ಹಿಂದಿಕ್ಕುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಲೀಲ್ ಮಾಸ್ಟರ್ ಮಾತನಾಡಿ ಕೇರಳದ ಮಂತ್ರಿಗಳಿಗೆ ಸಂಚರಿಸಲು ಕೋಟಿ ರೂ. ಬೆಲೆಯ ಕಾರುಗಳನ್ನು ಮಾಫಿಯದವರು ಉಚಿತವಾಗಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರೈವೇಟ್ ವಿಮಾನದಲ್ಲಿ ಸಂಚರಿಸುತ್ತಿದ್ದಾರೆ ಎಂದು ದೂರಿದರು.
ಮುಖಂಡರಾದ ಮಣಿಕಂಠ ರೈ, ಭಾಸ್ಕರ್ ಪೊಯ್ಯೇ, ರವಿ ರಾಜ್, ಯಾದವ ಬಡಾಜೆ, ಕೀರ್ತಿ ಭಟ್, ಚಂದ್ರಹಾಸ ಪೂಜಾರಿ, ಕೆ.ವಿ ಭಟ್, ನೇತೃತ್ವ ನೀಡಿದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.

You cannot copy contents of this page