ಮಧೂರು: ಪಂಚಾಯತ್‌ನಲ್ಲಿ ಒಂದೂವರೆ ಕೋಟಿ ರೂ.ಗಳಷ್ಟು ವೆಚ್ಚಮಾಡಿ ನಿರ್ಮಿಸಿದ ಗ್ಯಾಸ್‌ನಿಂದ ಕಾರ್ಯಾಚರಿಸುವ ಸಾರ್ವಜನಿಕ ಸ್ಮಶಾನವನ್ನು ಇದುವರೆಗೆ ತೆರೆದುಕೊಡ ದಿರುವುದರಲ್ಲಿ ಪಂಚಾಯತ್ ಉದಾಸೀನತೆ ತೋರುತ್ತಿದೆಯೆಂದು ಮಧೂರು ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಜನರ ತೆರಿಗೆ ಹಣ ಉಪಯೋಗಿಸಿ ಸ್ಥಾಪಿಸಿದ ಸ್ಮಶಾನದ ಉಪಕರಣಗಳು ತುಕ್ಕುಹಿಡಿದು ನಾಶವಾಗುತ್ತಿದೆಯೆಂದೂ ಕಾಂಗ್ರೆಸ್ ದೂರಿದ್ದು, ಶೀಘ್ರ ತೆರೆದು ಜನರಿಗೆ ಲಭ್ಯಗೊಳಿಸುವಂತೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ.ತ್ರಿಸ್ತರ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದರ ಹಿನ್ನೆಲೆಯಲ್ಲಿ ಮಧೂರು ಮಂಡಲದ ೩ನೇ ವಾರ್ಡ್ ಸಮಿತಿ ರೂಪೀಕರಣ ಸಭೆಯನ್ನು ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ಆರ್. ಗಂಗಾಧರನ್ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಕರೀಂ ಪಟ್ಲ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು
