ಉಪ್ಪಳ: ವಿದೇಶಿ ಗುಲಾಮಗಿರಿ ಯಿಂದ ದೇಶವನ್ನು ಸ್ವತಂತ್ರಗೊಳಿಸಿದ ತ್ಯಾಗಮಯಿ ಕಾಂಗ್ರೆಸ್ ನಾಯಕರು ಕಂಡ ಶಾಂತ ಸುಂದರ ಭಾರತದ ಕನಸನ್ನು ಭಗ್ನಗೊಳಿಸಿದ ಮತೀಯ ಶಕ್ತಿಗಳ ವಿರುದ್ಧ ನೈಜ ದೇಶಪ್ರೇಮಿಗಳಾದ ಕಾಂಗ್ರೆಸಿಗರು ಸಂಧಿಯಿಲ್ಲದ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಗೊಳಿಸಲು ಶ್ರಮಿಸಬೇಕಿದೆ. ಇದರ ಜೊತೆಗೆ ಮಾದಕ ದ್ರವ್ಯ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧವೂ ಹೋರಾಟ ನಡೆÀಸಬೇಕು ಎಂದು ಕರ್ನಾಟಕದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ರಮಾನಾಥ ರೈ ಕರೆ ನೀಡಿದ್ದಾರೆ.
ಅವರು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಂ ದ್ಯೋಡ್‌ನ ಬರ್ನಾರ್ಡ್ ಡಿ’ಅಲ್ಮೇ ಡಾರ ನಿವಾಸದಲ್ಲಿ ನಡೆದ ಮಹಾ ಕುಟುಂಬ ಸಂಗಮ ಉದ್ಘಾಟಿಸಿ ಮಾತನಾಡಿದರು. ಬಾಬು ಬಂದ್ಯೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಸೋಮಶೇಖರ ಶೇಣಿ, ಮುಹಮ್ಮದ್ ಡಿಎಂಕೆ, ಲಕ್ಷ್ಮಣ ಪ್ರಭು, ಮುಹಮ್ಮದ್ ಸೀಗಂಡಡಿ, ತಾಹಿರಾ ಮಣಿಮುಂಡ, ಅಶ್ರಫ್ ಮುಟ್ಟಂ, ಬರ್ನಾರ್ಡ್ ಡಿ’ಅಲ್ಮೇಡಾ, ಯೂಸುಫ್ ಮಾಸ್ಟರ್, ಮೊಯಿನ್ ಪೂನಾ, ಶಿಹಾಬ್ ಎಂಕೆ ಮುಂತಾದವರು ಉಪಸ್ಥಿತರಿದ್ದರು. ಫಾರೂಕ್ ಶಿರಿಯ ಸ್ವಾಗತಿಸಿ, ಹುಸೈನ್ ಕುಬಣೂರು ವಂದಿಸಿದರು.
