ಮೀಯಪದವು : ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ 141ನೇ ಸಂಸ್ಥಾಪನಾ ದಿನವನ್ನು ಆಚರಿಸ ಲಾಯಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೀಯಪದವಿನ ಪಕ್ಷದ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಕೇಕ್ ಕತ್ತರಿಸಿ ಚಾಲನೆ ನೀಡಿದರು. ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಕೆ, ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜಾ, ಪಂಚಾಯತ್ ಸದಸ್ಯೆ ಸೌಮ್ಯ ಕಳಿಯೂರು, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಚ್.ಎ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿ ದ್ದರು. ಹಮೀದ್ ಕಣಿಯೂರು ಸ್ವಾಗ ತಿಸಿದರು. ಕಾಂಗ್ರೆಸ್ ಮುಖಂಡರಾದ ಕಂಚಿಲ ಮೊಹಮ್ಮದ್, ಕಾಯಿಂಞ ಹಾಜೀ ತಲೆಕಳ, ಜಗದೀಶ್ ಮೂಡಂಬೈಲು, ಶೇಕ್ ಅಬ್ಬಾಸ್, ಮೊಹಮ್ಮದ್ ಶಾಫಿ ತಲೇಕಳ, ಗಂಗಾಧರ ಪಡ್ಪಿನಕೆರೆ, ಮೋನುಚ್ಚ ದೈಗೋಳಿ, ಮಿಸ್ರಿಯಾ ಮೀಯಪದವು, ಫಾತಿಮಾ ತಲೇಕಳ, ಮೆಟಿಲ್ಡಾ ಡಿ ಸೋಜ, ಪಳ್ಳಿ ಕುಂಞ ತಲೇಕಳ, ಫ್ರಾನ್ಸಿಸ್ ಡಿ’ಸೋಜಾ, ಮೊಹಮ್ಮದ್ ಕಲ್ಪಣೆ, ಡೆನ್ಸಿಲ್ ಡಿ’ಸೋಜ, ವಿನೋದ್ ಕುಮಾರ್ ಪಾವೂರು, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.







