ಶಬರಿಮಲೆ ಚಿನ್ನ ಕಳವು: ಕಾಂಗ್ರೆಸ್‌ನಿಂದ ಕಲೆಕ್ಟರೇಟ್ ಮಾರ್ಚ್, ಘರ್ಷಣೆ

ಕಾಸರಗೋಡು: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳನ್ನು ಸೆರೆಹಿಡಿದು ಜೈಲಿಗಟ್ಟಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಿನ್ನೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮಾರ್ಚ್ ನಡೆಸಿದರು.

ಕಲೆಕ್ಟರೇಟ್  ಬಳಿ ದಾರಿಯಲ್ಲಿ ಪೊಲೀಸರು ನಿರ್ಮಿಸಿದ್ದ ಬಾರಿಕೇಡನ್ನು ದೂಡಿಹಾಕಿ ಕಾರ್ಯಕರ್ತರು ಮುನ್ನುಗ್ಗಲೆತ್ನಿಸಿದಾಗ ಅವರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ದರು. ಆಗ ಅಲ್ಲಿ ಘರ್ಷಣೆಯ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರು ರಾಜ್ಯ  ಸರಕಾರದ ವಿರುದ್ಧ ಮುಗಿಲು ಮುಟ್ಟುವ ಘೋಷಣೆಯನ್ನು ಮೊಳಗಿಸಿದರು.

ಮಾರ್ಚ್‌ನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಕೀಂ ಕುನ್ನಿಲ್ ಸೇರಿದಂತೆ ಹಲವರು ಮಾತನಾಡಿದರು.

You cannot copy contents of this page